ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಿದ್ದಗಂಗಾಶ್ರೀಗೆ ಬಸವ ಪುರಸ್ಕಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿದ್ದಗಂಗಾಶ್ರೀಗೆ ಬಸವ ಪುರಸ್ಕಾರ
ರಾಜ್ಯ ಸರ್ಕಾರದಿಂದ ಏಳು ಪ್ರಶಸ್ತಿ ಪ್ರಕಟ
2007ನೇ ಸಾಲಿನ ಪ್ರತಿಷ್ಠಿತ ಬಸವ ಪುರಸ್ಕಾರ ಪ್ರಶಸ್ತಿಯನ್ನು ಸಿದ್ದಗಂಗಾ ಮಠಾಧೀಶ ಡಾ| ಶ್ರೀ ಶಿವಕುಮಾರ ಸ್ವಾಮೀಜಿಗಳನ್ನು ರಾಜ್ಯ ಸರ್ಕಾರ ಆಯ್ಕೆ ಮಾಡುವುದರ ಜೊತೆಗೆ ಹಲವು ಪ್ರಶಸ್ತಿಗಳನ್ನು ಪ್ರಕಟಿಸಿದೆ.

ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿಗೆ ಗದಗದ ಡಾ|ಪುಟ್ಟರಾಜ ಗವಾಯಿ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಗೆ(ಚಿತ್ರಕಲೆ) ರಾಯಚೂರಿನ ಶಂಕರಗೌಡ ಬೆಟ್ಟದೂರ್, ಜಕಣಾಚಾರಿ ಪ್ರಶಸ್ತಿಗೆ(ಶಿಲ್ಪಕಲೆ) ಬಾಗಲಕೋಟೆಯ ಮಲ್ಲೋಜ ಭೀಮರಾವ್ ಮಾಯಾಚಾರ್ಯ, ಡಾ|ಗುಬ್ಬಿ ವೀರಣ್ಣ ಪ್ರಶಸ್ತಿಗೆ ಬಳ್ಳಾರಿಯ ಬೆಳಗಲ್ಲು ವೀರಣ್ಣ ಸೇರಿದಂತೆ ಒಟ್ಟು ಏಳು ವಿವಿಧ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ.

ಈ ಪೈಕಿ ಆರು ಪ್ರಶಸ್ತಿಗಳು ಉತ್ತರ ಕರ್ನಾಟಕದ ಪಾಲಾಗಿದ್ದರೆ, ಬಸವ ಪುರಸ್ಕಾರ ಮಾತ್ರ ದಕ್ಷಿಣ ಕರ್ನಾಟಕ್ಕೆ ಸಂದಂತಾಗಿದೆ. ಪ್ರಶಸ್ತಿಯನ್ನು ನವೆಂಬರ್ ನಲ್ಲಿ ಪ್ರದಾನ ಮಾಡಲಾಗುವುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಬ್ಬಗಳ ಸಡಗರ-ಎಲ್ಲೆಡೆ ಪೊಲೀಸ್ ಸರ್ಪಗಾವಲು
ಈಜಿಪುರ ಪ್ರಕರಣ ಲೋಕಾಯುಕ್ತ ತನಿಖೆಗೆ
ಕುಮಾರಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ
ಮೈಸೂರು: ಒಡೆಯರ್ 'ದರ್ಬಾರ್'ಗೆ ಚಾಲನೆ
ಗಡುವು ವಿಸ್ತರಣೆ: ಲಾರಿ ಮುಷ್ಕರ ವಾಪಸ್
ಬಿಬಿಎಂಪಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್