ಗಣಿಧಣಿಗಳ ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ, ಸಚಿವ ಜನಾರ್ದನ ರೆಡ್ಡಿ ಅವರ ವಿರುದ್ಧ ಕಳ್ಳತನ ಆರೋಪದ ದೂರು ದಾಖಲಿಸಿಕೊಂಡ ಪೊಲೀಸ್ ಇನ್ಸ್‌ಪೆಕ್ಟರ್‌ನ್ನೇ ಇದೀಗ ವರ್ಗಾವಣೆ ಮಾಡಲಾಗಿದೆ.
ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ವಿರುದ್ಧ ವೋಲ್ವೋ ಫೋಕ್‌ಲೈನ್ ಕಳ್ಳತನದ ಆರೋಪದ ಕುರಿತು ತುಮಟಿ ಮೈನ್ಸ್, ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಈ ಕುರಿತು ಕಳೆದ ವಾರವಷ್ಟೇ ವರ್ಗವಾಗಿ ಬಂದಿದ್ದ ತೋರಣಗಲ್ಲು ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗೆ ವಿಷಯ ತಿಳಿದಿರಲಿಲ್ಲವಾಗಿತ್ತು.
ಈ ನಡುವೆ ಪ್ರಕರಣದ ಕುರಿತು ಸಚಿವರಿಗೆ ತಿಳಿಸಲು ಮೊಬೈಲ್ ಫೋನ್ ಕಾರ್ಯ ವ್ಯಾಪ್ತಿ ಪ್ರದೇಶದಲ್ಲಿರಲಿಲ್ಲ ಎಂಬ ಎಂಬ ಎಸೈ ನಂದೀಶ್ ಅವರ ಉತ್ತರ ಸಮಂಜಸ ಎನಿಸದ ಕಾರಣ, ಅವರನ್ನು ಬಳ್ಳಾರಿ ಎಸ್ಪಿ ಕಚೇರಿಗೆ ಎತ್ತಂಗಡಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಏತನ್ಮಧ್ಯೆ, ಪ್ರವಾಸೋದ್ಯಮ ಸಚಿವರ ವಿರುದ್ಧ ದೂರಿಗೆ ಕಾರಣರಾದ ಮಾಜಿ ಸಚಿವ ದಿವಾಕರ ಬಾಬು ವಿರುದ್ಧವೇ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಇನ್ನೊಂದು ಕೇಸು ದಾಖಲಿಸಿದ್ದಾರೆ.
|
|