ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಭಜರಂಗದಳದ ಮಹೇಂದ್ರ ಕುಮಾರ್ ರಾಜೀನಾಮೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಜರಂಗದಳದ ಮಹೇಂದ್ರ ಕುಮಾರ್ ರಾಜೀನಾಮೆ
ರಾಜ್ಯಾದ್ಯಂತ ಕ್ರೈಸ್ತ ಪ್ರಾರ್ಥನಾ ಮಂದಿರಗಳ ದಾಳಿಯ ಪ್ರಕರಣದ ಆರೋಪಿತರಾಗಿ,ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಭಜರಂಗದಳದ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಅವರು ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಭಜರಂಗದಳ ಕೇಂದ್ರೀಯ ಮಂಡಳಿಯ ಅಧ್ಯಕ್ಷ ಪ್ರಕಾಶ್ ಶರ್ಮಾ ಅವರ ನಿರ್ದೇಶನದಂತೆ ಮಹೇಂದ್ರ ಕುಮಾರ್ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಕಾಶ್ ಅವರ ಸೂಚನೆಯಂತೆ ರಾಜ್ಯ ಕಾರ್ಯದರ್ಶಿ ಕೇಶವ ಹೆಗಡೆ ಅವರು ಮಂಗಳವಾರ ಇಲ್ಲಿಗೆ ಆಗಮಿಸಿ ಮಹೇಂದ್ರ ಕುಮಾರ್ ಜೊತೆ ಮಾತುಕತೆ ನಡೆಸಿದ್ದು,ರಾಜೀನಾಮೆ ನೀಡುವಂತೆ ಕೇಂದ್ರ ಮಂಡಳಿ ಸೂಚಿಸಿದ್ದನ್ನು ತಿಳಿಸಿದರು.

ಚರ್ಚ್‌ಗಳ ಮೇಲೆ ಭಜರಂಗದಳ ಕಾರ್ಯಕರ್ತರೇ ದಾಳಿ ನಡೆಸಿದ್ದರು ಎಂದು ಹೇಳಿದ್ದು ಮತ್ತು ದಾಳಿಯನ್ನು ಸಮರ್ಥಿಸಿಕೊಂಡ ಕಾರಣಕ್ಕೆ ಮಹೇಂದ್ರ ಕುಮಾರ್ ಅವರ ರಾಜೀನಾಮೆ ಪಡೆಯಲಾಗಿದೆ ಎನ್ನಲಾಗಿದೆ.

ಮಹೇಂದ್ರ ಕುಮಾರ್ ಅವರ ರಾಜೀನಾಮೆ ಕೇಂದ್ರ ಮಂಡಳಿಯ ನಿರ್ಧಾರ.ಅದನ್ನು ಅವರು ಪಾಲಿಸಿದ್ದಾರೆ ಎಂದಷ್ಟೇ ಭಜರಂಗದಳದ ವಿನಯ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಲಿಕೆ ಚುನಾವಣೆಗೆ ಸರ್ಕಾರ ಸಿದ್ಧ: ಅಶೋಕ್
ಎಚ್‌ಡಿಕೆ ಹೇಳಿಕೆ ಪ್ರತಿಕ್ರಿಯೆ ಇಲ್ಲ: ಯಡಿಯೂರಪ್ಪ
ಯಡಿಯೂರಪ್ಪ ನಾಲಿಗೆ ಮೇಲೆ ಹಿಡಿತವಿರಲಿ: ದೇಶಪಾಂಡೆ
ಮೌಲ್ಯ ವರ್ಧಿತ ತೆರಿಗೆ ಇಲ್ಲ: ಅಶೋಕ್
ಮೊಕದ್ದಮೆಗೆ ಹೆದರಲಾರೆ: ಕುಮಾರಸ್ವಾಮಿ
ಭಯೋತ್ಪಾದನಾ ನಿಗ್ರಹಕ್ಕೆ ಕೇಂದ್ರ ಅಡ್ಡಿ:ಆಚಾರ್ಯ