ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹಂಪಿ ಉತ್ಸವ ಉದ್ಘಾಟನೆಗೆ ಆಡ್ವಾಣಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಂಪಿ ಉತ್ಸವ ಉದ್ಘಾಟನೆಗೆ ಆಡ್ವಾಣಿ
ಪ್ರಸಿದ್ಧ ಪ್ರವಾಸಿ ಸ್ಥಳವಾಗಿರುವ ಹಂಪಿಯಲ್ಲಿ ಈ ಬಾರಿ ನವೆಂಬರ್ 3 ರಿಂದ ನಡೆಯುವ ಹಂಪಿ ಉತ್ಸವಕ್ಕೆ 2.5ಕೋಟಿ ರೂ.ಬಿಡುಗಡೆಯಾಗಿದ್ದು,ಮಾಜಿ ಉಪ ಪ್ರಧಾನಿ ಎಲ್.ಕೆ.ಆಡ್ವಾಣಿ ಉತ್ಸವ ಉದ್ಘಾಟಿಸಲಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

ಸರ್ಕಾರ ಪ್ರತಿವರ್ಷ ನೀಡುವ 1ಕೋಟಿ ರೂ.ಜತೆಗೆ ಹೆಚ್ಚುವರಿಯಾಗಿ 1ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ 50ಲಕ್ಷ ರೂ.ಗಳನ್ನು ಬಿಡುಗಡೆಯಾಗಿದೆ. ವಿಜಯನಗರ ಶಾಸಕ ಬಿ.ಎಸ್.ಆನಂದ ಸಿಂಗ್ ಹಾಗೂ ಸ್ಥಳೀಯ ಗಣಿ ಉದ್ಯಮಿಗಳ ನೆರವು ಪಡೆಯಲಾಗುವುದು ಎಂದು ಹೇಳಿದರು.

ಬಾಲಿವುಡ್‌ನ ಖ್ಯಾತ ನಟಿ, ಕಲಾವಿದೆ ಹೇಮಾಮಾಲಿನಿ ಸೇರಿದಂತೆ ದೇಶದ ಖ್ಯಾತ ಕಲಾವಿದರು ಕಾರ್ಯಕ್ರಮ ನೀಡಲಿದ್ದು,ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಅಗತ್ಯ ಸಿದ್ದತೆ ಕೈಗೊಳ್ಳಲಾಗುತ್ತಿದೆ. ಉತ್ಸವವನ್ನು ರಾಜ್ಯದ ಜನತೆ ವೀಕ್ಷಿಸಲು ಅನುಕೂಲವಾಗುವಂತೆ ಪ್ರತಿ ಜಿಲ್ಲಾ ಕೇಂದ್ರದಿಂದ ಕನಿಷ್ಠ 2ಬಸ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಂಗಳೂರು ಉಗ್ರರ ಜಾಲ:11 ಮಂದಿ ವಶಕ್ಕೆ
ಕರ್ನಾಟಕ ಸಾಹಿತ್ಯ ಪರಿಷತ್ ಉದಯ
ಪ್ರತಿಪಕ್ಷಗಳನ್ನು ಕಾಡುಮೃಗಗಳೆಂದಿಲ್ಲ:ಸಿಎಂ ಸ್ಪಷ್ಟನೆ
ಜೆಲಿಟಿನ್ ಸ್ಫೋಟ:ಇಬ್ಬರಿಗೆ ಗಾಯ
ನಿರ್ದೇಶಕ ಎಸ್.ನಾರಾಯಣ್ ಅರ್ಜಿ ವಜಾ
ಜೆಡಿಎಸ್ ನಿಂದ ಕಲ್ಪನಾ ಸಿದ್ದರಾಜು ಕಣಕ್ಕೆ