ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಈದ್ಗಾ ಮೈದಾನ ಪ್ರವೇಶಿಸದಂತೆ ಸಚಿವರಿಗೆ ನಿರ್ಬಂಧ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಈದ್ಗಾ ಮೈದಾನ ಪ್ರವೇಶಿಸದಂತೆ ಸಚಿವರಿಗೆ ನಿರ್ಬಂಧ
ಚಿತ್ರದುರ್ಗ ದೇವದುರ್ಗದ ಈದ್ಗಾ ಮೈದಾನದೊಳಕ್ಕೆ ಪ್ರವೇಶಿಸದಂತೆ ವಯಸ್ಕರ ಶಿಕ್ಷಣ ಸಚಿವ ಶಿವನಗೌಡ ನಾಯಕರಿಗೆ ಮುಸ್ಲಿಂ ಸಮುದಾಯ ನಿರ್ಬಂಧ ಹೇರಿರುವ ಘಟನೆ ಗುರುವಾರ ನಡೆದಿದೆ.

ರಂಜಾನ್ ಹಬ್ಬದ ಪ್ರಯುಕ್ತ ಸಚಿವರು ಮುಸ್ಲಿಂರ ಸಾಮೂಹಿಕ ಪ್ರಾರ್ಥನಾ ಸ್ಥಳ ಈದ್ಗಾ ಮೈದಾನಕ್ಕೆ ಪ್ರಾರ್ಥನೆ ಸಲ್ಲಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿ,ನಿರ್ಬಂಧ ಹೇರಿತ್ತು. ಈ ಘಟನೆಯಿಂದ ಶಿವನಗೌಡ ತೀವ್ರ ಮುಜುಗರಕ್ಕೆ ಈಡಾಗಬೇಕಾಯಿತು.

ಮೈದಾನ ಪ್ರವೇಶಿಸುತ್ತಿದ್ದಂತೆಯೇ ಸಚಿವರನ್ನು ತಡೆದ ಮುಸ್ಲಿಂರು, ಜೆಡಿಎಸ್‌ನಿಂದ ಆಯ್ಕೆಯಾದ ನೀವು ಸ್ಥಳೀಯ ಮತದಾರರ ಅಭಿಪ್ರಾಯದ ವಿರುದ್ಧವಾಗಿ ಕೋಮುವಾದಿ ಬಿಜೆಪಿ ಪಕ್ಷ ಸೇರಿದ್ದೀರಿ.ಮತದಾರರೊಂದಿಗೆ ನಡೆದುಕೊಂಡ ರೀತಿ ಸರಿಯಲ್ಲ. ನೀವು ನಮ್ಮೊಂದಿಗೆ ಬೆರೆಯಲು ಅರ್ಹರಲ್ಲ, ದಯವಿಟ್ಟು ಇಲ್ಲಿಂದ ತೆರಳಿ ಎಂದು ಪಟ್ಟು ಹಿಡಿದರು.

ವಾಗ್ವಾದ ನಡೆದು, ಪರಿಸ್ಥಿತಿ ಹದಗೆಡುತ್ತಿರುವುದನ್ನು ಅರಿತ ಸಚಿವ ಶಿವನಗೌಡರು ಕೂಡಲೇ ಅಲ್ಲಿಂದ ಕಾಲ್ಕಿತ್ತರು. ದೇವದುರ್ಗ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಶಿವನಗೌಡ ಅವರು, ನಂತರ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿದ್ದಗಂಗಾಶ್ರೀ ವಿರುದ್ಧ ಕುಮಾರಸ್ವಾಮಿ ಕಿಡಿ
ಹಂಪಿ ಉತ್ಸವ ಉದ್ಘಾಟನೆಗೆ ಆಡ್ವಾಣಿ
ಮಂಗಳೂರು: ಶಂಕಿತ ಉಗ್ರನ ಸಹಿತ 11 ಮಂದಿ ಸೆರೆ
ಕರ್ನಾಟಕ ಸಾಹಿತ್ಯ ಪರಿಷತ್ ಉದಯ
ಪ್ರತಿಪಕ್ಷಗಳನ್ನು ಕಾಡುಮೃಗಗಳೆಂದಿಲ್ಲ:ಸಿಎಂ ಸ್ಪಷ್ಟನೆ
ಜೆಲಿಟಿನ್ ಸ್ಫೋಟ:ಇಬ್ಬರಿಗೆ ಗಾಯ