ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಉಗ್ರರ ನೆರಳು: ಮೈಸೂರಿಗೆ ಹೆಚ್ಚಿದ ಭದ್ರತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರ ನೆರಳು: ಮೈಸೂರಿಗೆ ಹೆಚ್ಚಿದ ಭದ್ರತೆ
ಮಂಗಳೂರಿನಲ್ಲಿ ಶಂಕಿತ ಉಗ್ರರನ್ನು ವಶಪಡಿಸಿಕೊಂಡಿರುವ ಬೆನ್ನಲ್ಲೆ ಸಾಂಸ್ಕೃತಿಕ ನಗರ ಮೈಸೂರಿಗೂ ಉಗ್ರರ ನುಸುಳುವಿಕೆ ಕುರಿತು ವರದಿ ಬಂದಿರುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಕೇರಳದಿಂದ ಉಗ್ರರು ನಗರಕ್ಕೆ ನುಸುಳಿರುವ ಶಂಕೆ ವ್ಯಕ್ತವಾಗಿದ್ದು, ವಿದ್ವಂಸಕ ಕೃತ್ಯ ನಡೆಸುವ ಹುನ್ನಾರ ನಡೆಸುತ್ತಿರುವ ಕುರಿತು ಗುಪ್ತಚರ ಇಲಾಖೆಗೆ ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ ನಗರಕ್ಕೆ ಬಿಗಿ ಬಂದೋ ಬಸ್ತ್ ಏರ್ಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

ಈ ನಿಟ್ಟಿನಲ್ಲಿ ನಗರಕ್ಕೆ ಆಗಮಿಸಿರುವ ಕೇರಳ ಪೊಲೀಸ್ ತಂಡದೊಂದಿಗೆ ರಾಜ್ಯ ಪೊಲೀಸ್ ತಂಡ ಮೈಸೂರು-ಕೇರಳದ ಮಾರ್ಗಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ.

ಇದೇ ವೇಳೆ ಅರಮನೆ ಸೇರಿದಂತೆ ನಗರದಲ್ಲಿ ಎಲ್ಲಾ ಕಡೆಗಳಲ್ಲಿಯೂ ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಅರಮನೆಗೆ 3 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಬಳಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ವ್ಯಾಪಕ ಭದ್ರತೆ ನಡೆಸಲಾಗಿದೆ.

ಎಲ್ಲಾ ಕಡೆಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳನ್ನು ಇಡಲಾಗಿದ್ದು, ಜಂಬೂ ಸವಾರಿ ನಡೆಯಲಿರುವ ಮಾರ್ಗಗಳ ಮಧ್ಯೆಗಳಲ್ಲಿ ವಿಶೇಷ ಭದ್ರತೆ ನಿಯೋಜಿಸಲಾಗಿದೆ. ನಗರಕ್ಕೆ ಬರುವ ಪ್ರವಾಸಿಗರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಈದ್ಗಾ ಮೈದಾನ ಪ್ರವೇಶಿಸದಂತೆ ಸಚಿವರಿಗೆ ನಿರ್ಬಂಧ
ಸಿದ್ದಗಂಗಾಶ್ರೀ ವಿರುದ್ಧ ಕುಮಾರಸ್ವಾಮಿ ಕಿಡಿ
ಹಂಪಿ ಉತ್ಸವ ಉದ್ಘಾಟನೆಗೆ ಆಡ್ವಾಣಿ
ಮಂಗಳೂರು: ಶಂಕಿತ ಉಗ್ರನ ಸಹಿತ 11 ಮಂದಿ ಸೆರೆ
ಕರ್ನಾಟಕ ಸಾಹಿತ್ಯ ಪರಿಷತ್ ಉದಯ
ಪ್ರತಿಪಕ್ಷಗಳನ್ನು ಕಾಡುಮೃಗಗಳೆಂದಿಲ್ಲ:ಸಿಎಂ ಸ್ಪಷ್ಟನೆ