ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಉಗ್ರರ ಪರ ವಾದಿಸಿದರೆ ಹತ್ಯೆ: ರವಿ ಪೂಜಾರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರ ಪರ ವಾದಿಸಿದರೆ ಹತ್ಯೆ: ರವಿ ಪೂಜಾರಿ
ಮಂಗಳೂರಿನಲ್ಲಿ ಉಗ್ರರ ಸಂಪರ್ಕ ಜಾಲದ ಜಾಡನ್ನು ಪತ್ತೆ ಹಚ್ಚಿರುವ ಇಲಾಖೆ,ಇದೀಗ ಗುರುವಾರ ರಾತ್ರಿ ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ ಇಂಡಿಯನ್ ಮುಜಾಹಿದೀನ್‌ನ ನಾಲ್ಕು ಮಂದಿ ಉಗ್ರರನ್ನು ಬಂಧಿಸಿದ್ದು, ಸೆರೆ ಹಿಡಿದ ಉಗ್ರರ ವಿರುದ್ಧ ಯಾರಾದರೂ ವಕಾಲತ್ತು ವಹಿಸಿದರೆ ಅವರನ್ನು ಕೊಲ್ಲುವುದಾಗಿ ಭೂಗತ ಜಗತ್ತಿನ ರವಿ ಪೂಜಾರಿ ಧಮಕಿ ಹಾಕಿದ್ದಾರೆ.

ಮಂಗಳೂರಿನಲ್ಲಿ ಬಂಧಿತನಾಗಿರುವ ಉಗ್ರನ ಪರವಾಗಿ ಯಾವುದೇ ವಕೀಲರು ಆತನ ಪರ ವಾದ ಮಂಡಿಸಲು ಮುಂದಾದರೆ ಹುಷಾರ್ ಎಂಬುದಾಗಿ ಅಂಡರ್‌ ವರ್ಲ್ಡ್ ಡಾನ್ ರವಿ ಪೂಜಾರಿ ಟಿವಿ9ಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಎಚ್ಚರಿಕೆ ನೀಡಿದ್ದಾನೆ.

ದೇಶದ ಸೌಹಾರ್ದತೆಯನ್ನು ಹಾಳುಗೆಡುವ ಉಗ್ರರ ವಿರುದ್ಧ ಕಿಡಿ ಕಾರಿರುವ ಪೂಜಾರಿ, ಇದಕ್ಕೆಲ್ಲಾ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಎಂಬುದಾಗಿ ಆರೋಪಿಸಿದ್ದಾರೆ.

ಇಂತಹ ದೇಶದ್ರೋಹಿಗಳಿಗೆ ಕುಮ್ಮಕ್ಕು ನೀಡುತ್ತಿರುವ ದಾವೂದ್ ಇಬ್ರಾಹಿಂನನ್ನು ಮೊದಲು ಮುಗಿಸಿ ಬಿಟ್ಟರೆ ದೇಶದಲ್ಲಿ ತಾಂಡವಾಡುತ್ತಿರುವ ಉಗ್ರರ ಅಟ್ಟಹಾಸಕ್ಕೆ ತೆರೆ ಎಳೆದಂತಾಗುತ್ತದೆ ಎಂದು ಪೂಜಾರಿ ಗುಡುಗಿದ್ದಾನೆ.

ಮಂಗಳೂರು ಸೇರಿದಂತೆ ಕರಾವಳಿ ಪ್ರದೇಶ ಉಗ್ರರ ತಾಣವಾಗುತ್ತಿದ್ದು, ಇದೀಗ ಮುಂಬೈ ಹಾಗೂ ಮಂಗಳೂರು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ಕು ಉಗ್ರರು ಸೇರಿದಂತೆ ಒಟ್ಟು 11ಮಂದಿಯನ್ನು ಸೆರೆ ಹಿಡಿಯಲಾಗಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರರ ನೆರಳು: ಮೈಸೂರಿಗೆ ಹೆಚ್ಚಿದ ಭದ್ರತೆ
ಈದ್ಗಾ ಮೈದಾನ ಪ್ರವೇಶಿಸದಂತೆ ಸಚಿವರಿಗೆ ನಿರ್ಬಂಧ
ಸಿದ್ದಗಂಗಾಶ್ರೀ ವಿರುದ್ಧ ಕುಮಾರಸ್ವಾಮಿ ಕಿಡಿ
ಹಂಪಿ ಉತ್ಸವ ಉದ್ಘಾಟನೆಗೆ ಆಡ್ವಾಣಿ
ಮಂಗಳೂರು: 4 ಇಂಡಿಯನ್ ಮುಜಾಹಿದೀನ್ ಉಗ್ರರ ಸೆರೆ
ಕರ್ನಾಟಕ ಸಾಹಿತ್ಯ ಪರಿಷತ್ ಉದಯ