ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಶೀಘ್ರವೇ ಲೋಡ್‌ ಶೆಡ್ಡಿಂಗ್ ರದ್ದು:ಈಶ್ವರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೀಘ್ರವೇ ಲೋಡ್‌ ಶೆಡ್ಡಿಂಗ್ ರದ್ದು:ಈಶ್ವರಪ್ಪ
ರಾಜ್ಯದಲ್ಲಿ ಜಾರಿಯಲ್ಲಿರುವ ಲೋಡ್ ಶೆಡ್ಡಿಂಗ್ ಅನ್ನು 15 ದಿನಗಳಲ್ಲಿ ರದ್ದುಪಡಿಸಲಾಗುವುದು ಎಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಲೋಡ್ ಶೆಡ್ಡಿಂಗ್ ಈಗಾಗಲೇ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ ಎಂದರು.

ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಹಾಗೂ ರೈತರ ಪಂಪ್ ಸೆಟ್‌‌ಗಳಿಗೆ ವಿದ್ಯುತ್ ಪೂರೈಸಲು ಲೋಡ್ ಶೆಡ್ಡಿಂಗ್ ರದ್ದು ಮಾಡಲಾಗುವುದು ಎಂದು ಈಶ್ವರಪ್ಪ ಸುದ್ದಿಗಾರರಿಗೆ ತಿಳಿಸಿದರು. ರಾಜ್ಯದಲ್ಲಿ ಹೆಚ್ಚಿನ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದಿಂದ ಎರಡು ದಿನಗಳ ಹಿಂದೆ 150 ಮೆಗಾವ್ಯಾಟ್ ವಿದ್ಯುತ್ ಬಂದಿದೆ.

ಟಾಟಾ, ಜಿಂದಾಲ್ ಸೇರಿದಂತೆ ಎಲ್ಲೆಲ್ಲಿ ವಿದ್ಯುತ್ ಸಿಗುತ್ತದೋ ಅಲ್ಲಿಂದ ಎಷ್ಟು ಹಣ ಬೇಕಾದರೂ ಖರ್ಚು ಮಾಡಿ ವಿದ್ಯುತ್ ತರಲು ಸರ್ಕಾರ ಸಿದ್ಧವಿದೆ ಎಂದರು. ಬಿಜಾಪುರದ ಕೂಡಗಿಯಲ್ಲಿ 2,000 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದರು.

ವಿದ್ಯುತ್ ಹಂಚಿಕೆಯಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಗಟ್ಟಲು ಮಾಲೂರಿನಲ್ಲಿ ನ.1ರಿಂದ ಪ್ರಾಯೋಗಿಕ ಯೋಜನೆ ಪ್ರಾರಂಭಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೈತ್ರಿ ಸರಕಾರದ ಅವ್ಯವಹಾರ ತನಿಖೆಯಾಗಲಿ ಎಂದ ಕುಮಾರ!
ಆಸ್ಕರ್ ವಿರುದ್ಧ ಪ್ರಧಾನಿಗೆ ದೂರು: ಯಡಿಯೂರಪ್ಪ
ಉಗ್ರರ ತಾಣ:ಪೊಲೀಸ್ ಅಧಿಕಾರಿಗಳ ಸಭೆ
ಗುಂಪುಗಾರಿಕೆ ಪಕ್ಷದ ಸೋಲಿಗೆ ಕಾರಣ:ಖರ್ಗೆ
ದಾಳಿ ಪ್ರಕರಣ-ಸರ್ಕಾರದ ನಿರ್ಧಾರ ಅಚಲ:ಸಿಎಂ
ದಾಳಿ ಪ್ರಕರಣ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್