ಬೆಂಗಳೂರು: ಹಾಲಿನ ದರವನ್ನು ಏರಿಸುವ ಪ್ರಶ್ನೆಯೇ ಇಲ್ಲ. ಲೆಕ್ಕ ಪರಿಶೋದಕರಿಂದ ವರದಿ ತರಿಸಿ ನೋಡಿದಾಗ ಕೆಎಂಎಫ್ ಲಾಭದಲ್ಲಿದೆ ಎಂದು ಗೊತ್ತಾಗಿದೆ. ಅದಕ್ಕಾಗಿ ಕೆಎಂಎಫ್ ಅಧ್ಯಕ್ಷರ ಮನವೊಲಿಸುತ್ತೇನೆ ಎಂಬ ಸಚಿವ ಲಕ್ಷ್ಮಣ ಸವದಿ ಹೇಳಿಕೆಗೆ ಕೆಎಂಎಫ್ ಅಧ್ಯಕ್ಷ ರೇವಣ್ಣ ಆಕ್ರೋಶಗೊಂಡಿದ್ದಾರೆ.
ಸಚಿವರು ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಬಾರದು. ಕೆಎಂಎಫ್ ಹಾಲಿನ ದರವನ್ನು 2 ರೂ.ಏರಿಸುವುದು ಅನಿವಾರ್ಯ. ಇದರಿಂದ ಸಂಸ್ಥೆಯ ನಷ್ಟವನ್ನು ತುಂಬುವುದರ ಜೊತೆಗೆ ಹೈನುಗಾರಿಕೆಯನ್ನು ನಂಬಿಕೊಂಡಿರುವ ರೈತರಿಗೂ ಸಹಾಯವಾಗುತ್ತದೆ ಎಂದರು.
ಕೆಎಂಎಫ್ ಯಾವುದೇ ದುರುದ್ದೇಶದಿಂದ ಅಥವಾ ದ್ವೇಷದ ರಾಜಕಾರಣಕ್ಕಾಗಿ ದರ ಏರಿಸಲು ಚಿಂತಿಸಲ್ಲ. ಅನಿವಾರ್ಯತೆ ಇರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದರು.ಇದರೊಂದಿಗೆ ಸರ್ಕಾರದ ಹಾಗೂ ಗೌಡರ ಕುಟುಂಬದ ನಡುವೆ ಮುಸುಕಿನ ಗುದ್ದಾಟ ಇನ್ನಷ್ಟು ತೀವ್ರತೆ ಪಡೆದಿದೆ. |