ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಂಗಳೂರು:ಶಂಕಿತ ಉಗ್ರರು ಮುಂಬೈ ಪೊಲೀಸರ ವಶಕ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಂಗಳೂರು:ಶಂಕಿತ ಉಗ್ರರು ಮುಂಬೈ ಪೊಲೀಸರ ವಶಕ್ಕೆ
ಮಂಗಳೂರು ಪರಿಸರದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಇಂಡಿಯನ್ ಮುಜಾಹಿದೀನ್ ಸಂಘಟನೆಗೆ ಸೇರಿದ್ದರೆನ್ನಲಾದ ಶುಕ್ರವಾರ ರಾತ್ರಿ ಬಂಧಿಸಿರುವ ನಾಲ್ಕು ಮಂದಿಗೆ ಶಂಕಿತ ಉಗ್ರರಿಗೆ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ಶನಿವಾರ ಅಕ್ಟೋಬರ್ 13ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಏತನ್ಮಧ್ಯೆ ಶಂಕಿತರನ್ನು ಮುಂಬೈ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಆದರೆ ಮುಂಬೈ ಪೊಲೀಸರು ಬಂಧಿತರನ್ನು ತಮ್ಮ ವಶಕ್ಕೆ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದು, ಬಾಡಿ ವಾರೆಂಟ್‌‌ನೊಂದಿಗೆ ನೀವು ಬಂಧಿತರನ್ನು ನಿಮ್ಮ ವಶಕ್ಕೆ ತೆಗೆದುಕೊಳ್ಳಬಹುದು ಎಂದು ನ್ಯಾಯಾಧೀಶರು ಸೂಚಿಸಿದರು.

ನ್ಯಾಯಾಧೀಶರ ಸೂಚನೆ ಮೇರೆಗೆ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಶಂಕಿತ ಉಗ್ರರನ್ನು ತಮ್ಮ ವಶಕ್ಕೊಪ್ಪಿಸುವಂತೆ ಮುಂಬೈ ಪೊಲೀಸರು ಬಾಡಿ ವಾರೆಂಟ್‌‌ ಮೂಲಕ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವುದಾಗಿ ಮಂಗಳೂರು ಪೊಲೀಸ್ ಮೂಲಗಳು ತಿಳಿಸಿವೆ.

ಉಳ್ಳಾಲ ಮುಕ್ಕಚ್ಚೇರಿಯ ರಿಯಲ್ ಎಸ್ಟೇಟ್ ಏಜೆಂಟ್ ಮಹಮ್ಮದಾಲಿ (56), ಆತನ ಮಗ, ಉಳ್ಳಾಲ ಕುರಾನಿಕ್ ಅಧ್ಯಯನ ವಿದ್ಯಾರ್ಥಿ ಜಾವೇದಾಲಿ (20), ಸುಭಾಷ್ ನಗರದ ನೌಶಾದ್ (25) ಹಾಗೂ ಹಳೆಯಂಗಡಿಯ ಅಹ್ಮದ್ ಬಾವ (33) ಸೇರಿದಂತೆ ನಾಲ್ಕು ಮಂದಿಯನ್ನು ಮಂಗಳೂರು,ಮುಂಬೈ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.

ಬಂಧನದ ವೇಳೆ 5 ಸಜೀವ ಬಾಂಬ್, 11 ಲಕ್ಷ ರೂ. ನಗದು, ಬೈಕ್, ಮೊಬೈಲ್, ಸಿಮ್ ಕಾರ್ಡ್‌ಗಳು, ಕಂಪ್ಯೂಟರ್‌ಗಳು ಮತ್ತಿತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸವದಿ ವಿರುದ್ಧ ರೇವಣ್ಣ ಆಕ್ರೋಶ
ವಿಟ್ಲದಲ್ಲಿ ಸ್ಫೋಟಕ ಸಹಿತ ವ್ಯಕ್ತಿಯ ಸೆರೆ
ಅಸ್ನೋಟಿಕರ್ ರಾಜೀನಾಮೆಗೆ ಉಗ್ರಪ್ಪ ಆಗ್ರಹ
ಕುಮಾರಸ್ವಾಮಿ ವಿರುದ್ಧ ಲಿಂಗಾಯಿತರ ಆಕ್ರೋಶ
ಶೀಘ್ರವೇ ಲೋಡ್‌ ಶೆಡ್ಡಿಂಗ್ ರದ್ದು:ಈಶ್ವರಪ್ಪ
ಮೈತ್ರಿ ಸರಕಾರದ ಅವ್ಯವಹಾರ ತನಿಖೆಯಾಗಲಿ ಎಂದ ಕುಮಾರ!