ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕುಮಾರಸ್ವಾಮಿ ಕ್ಷಮೆಯಾಚನೆಗೆ ಕಟ್ಟಾ ಆಗ್ರಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕುಮಾರಸ್ವಾಮಿ ಕ್ಷಮೆಯಾಚನೆಗೆ ಕಟ್ಟಾ ಆಗ್ರಹ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಿದ್ಧಗಂಗಾ ಸ್ವಾಮೀಜಿಗಳ ವಿರುದ್ಧ ಹೇಳಿಕೆ ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕೆಂದು ಸಚಿವರಾದ ಆರ್.ಅಶೋಕ್ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಆಗ್ರಹಿಸಿದ್ದಾರೆ.

ಜನತೆಯಿಂದ ತಿರಸ್ಕೃತರಾಗಿರುವ ಕುಮಾರಸ್ವಾಮಿ ತಮ್ಮ ಘನತೆಗೆ ತಕ್ಕಂತ ಭಾಷೆ ಬಳಸಬೇಕು. ಅನುಭವದ ಕೊರತೆಯಿಂದ ರಚನಾತ್ಮಕ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಸಚಿವದ್ವಯರು ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈಜಿಪುರದ ದುರ್ಬಲ ವರ್ಗಗಳಿಗೆ ವಸತಿ ಸಂಕೀರ್ಣ ನಿರ್ಮಾಣ ವಿಚಾರವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸುವ ಮೂಲಕ ಮುಖ್ಯಮಂತ್ರಿ ದಿಟ್ಟನಿರ್ಧಾರ ತಳೆದಿದ್ದಾರೆ ಎಂದು ಹೇಳಿದ್ದಾರೆ. ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುವಂತೆ ಸ್ವಾಮೀಜಿಗಳ ಬಗ್ಗೆ ಹೇಳಿಕೆ ನೀಡುತ್ತಿರುವುದು ಖಂಡನೀಯ. ಇದು ಕಾಣೆಯಾಗಿರುವ ವಿವೇಕವನ್ನು ಬಯಲು ಮಾಡಿದೆ ಎಂದು ಜರೆದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದಾಳಿ: ಮಠಾಧೀಶರಿಂದ ಶಾಂತಿಯಾತ್ರೆ
ಅಲ್ಟ್ರಾಮೆಗಾ ಯೋಜನೆ ಕೇಂದ್ರದಿಂದ ವಾಪಸ್
ಮಂಗಳೂರು:ಶಂಕಿತ ಉಗ್ರರು ಮುಂಬೈ ಪೊಲೀಸರ ವಶಕ್ಕೆ
ಸವದಿ ವಿರುದ್ಧ ರೇವಣ್ಣ ಆಕ್ರೋಶ
ವಿಟ್ಲದಲ್ಲಿ ಸ್ಫೋಟಕ ಸಹಿತ ವ್ಯಕ್ತಿಯ ಸೆರೆ
ಅಸ್ನೋಟಿಕರ್ ರಾಜೀನಾಮೆಗೆ ಉಗ್ರಪ್ಪ ಆಗ್ರಹ