ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕುಮಾರಸ್ವಾಮಿ ಸರ್ಕಾರಕ್ಕೆ ಮತ್ತೆ ಸವಾಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕುಮಾರಸ್ವಾಮಿ ಸರ್ಕಾರಕ್ಕೆ ಮತ್ತೆ ಸವಾಲ್
ತಮ್ಮ ವಿರುದ್ಧದ 150 ಕೋಟಿ ರೂ. ಲಂಚ ಸ್ವೀಕಾರ ಆರೋಪಕ್ಕೆ ಸಾಕ್ಷ್ಯಾಧಾರಗಳಿದ್ದಲ್ಲಿ ಸರ್ಕಾರ ಲೋಕಾಯುಕ್ತರಿಂದ ತನಿಖೆ ನಡೆಸಲಿ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಹಿಂದಿನ ಸರ್ಕಾರದ ಅವಧಿಯಲ್ಲಿನ ಕೆಲ ಹಗರಣಗಳ ಬಗ್ಗೆ ಲೋಕಾಯುಕ್ತರಿಂದ ತನಿಖೆ ಮಾಡಿಸುವುದಾಗಿ ಸರ್ಕಾರ ಘೋಷಿಸಿದೆ. ಈಗ ಸಚಿವರಾಗಿರುವ ವಿಧಾನ ಪರಿಷತ್ ಸದಸ್ಯರೊಬ್ಬರು ಆಗ ನನ್ನ ವಿರುದ್ಧ ಮಾಡಿದ್ದ ಲಂಚ ಸ್ವೀಕಾರ ಆರೋಪದ ಬಗ್ಗೆ ಸರ್ಕಾರ ಏಕೆ ಮೌನವಹಿಸಿದೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ರಿಪೋರ್ಟರ್ಸ್ ಗಿಲ್ಡ್ ಏರ್ಪಡಿಸಿದ್ದ ಪತ್ರಿಕಾ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು. ಸ್ಪಷ್ಟ ಬಹುಮತ ಪಡೆಯಲು ‘ಆಪರೇಷನ್ ಕಮಲ’ ಮೂಲಕ ಪ್ರತಿಪಕ್ಷ ಶಾಸಕರನ್ನು ಸೆಳೆದುಕೊಂಡ ಮುಖ್ಯಮಂತ್ರಿ ಅದರ ಫಲ ಅನುಭವಿಸುತ್ತಾರೆ.

ಉಪಚುನಾವಣೆಯಲ್ಲಿ ಸೋತರೆ ಯಡಿಯೂರಪ್ಪ ಸರ್ಕಾರದ ಭವಿಷ್ಯವನ್ನು ಆ ಪಕ್ಷದ ವರಿಷ್ಠರೇ ನಿರ್ಧರಿಸುತ್ತಾರೆ. ಪ್ರತಿಪಕ್ಷಗಳು ಏನೂ ಮಾಡಬೇಕಿಲ್ಲ ಎಂದರು.
ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿ ಅಸಾಧ್ಯ ಎಂದು ಮಾಜಿ ಸಿಎಂ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಂಡ್ಯ:ಗಾಂಧಿ ಪ್ರತಿಮೆ ತೆರವು-ಪರಿಸ್ಥಿತಿ ಉದ್ವಿಗ್ನ
ಕುಮಾರಸ್ವಾಮಿ ಕ್ಷಮೆಯಾಚನೆಗೆ ಕಟ್ಟಾ ಆಗ್ರಹ
ದಾಳಿ: ಮಠಾಧೀಶರಿಂದ ಶಾಂತಿಯಾತ್ರೆ
ಅಲ್ಟ್ರಾಮೆಗಾ ಯೋಜನೆ ಕೇಂದ್ರದಿಂದ ವಾಪಸ್
ಮಂಗಳೂರು:ಶಂಕಿತ ಉಗ್ರರು ಮುಂಬೈ ಪೊಲೀಸರ ವಶಕ್ಕೆ
ಸವದಿ ವಿರುದ್ಧ ರೇವಣ್ಣ ಆಕ್ರೋಶ