ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹಿಂದೂ ಧರ್ಮದ ಲೋಪ ಸರಿಪಡಿಸಿ:ರೇವಣಶ್ರೀ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಿಂದೂ ಧರ್ಮದ ಲೋಪ ಸರಿಪಡಿಸಿ:ರೇವಣಶ್ರೀ
ಹಿಂದೂ ಧರ್ಮದಲ್ಲಿರುವ ಲೋಪದೋಷಗಳನ್ನು ಸರಿಪಡಿಸದ ಹೊರತು ಮತಾಂತರದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಮಠಾಧೀಶರಿಗೆ ಇಲ್ಲ ಎಂದು ಧಾರವಾಡದ ರೇವಣ ಸಿದ್ಧೇಶ್ವರ ಮಠದ ಬಸವರಾಜದೇವರು ಹೇಳಿದರು.

ಕ್ರೈಸ್ತರ ಪ್ರಜಾತಂತ್ರ ಸಂಘಟನೆಗಳ ಒಕ್ಕೂಟ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರಜಾಪ್ರಭುತ್ವ ಮತ್ತು ಕೋಮುವಾದ ಕುರಿತ ವಿಚಾರಣ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಶತಶತಮಾನಗಳಿಂದ ಆಚರಣೆಯಲ್ಲಿರುವ ಅಸ್ಪ್ರಶ್ಯತೆ ಇಂದಿಗೂ ಜೀವಂತವಾಗಿದೆ. ಇದನ್ನು ನಿರ್ಮೂಲನೆ ಮಾಡುವಲ್ಲಿ ಮಠಾಧಿಪತಿಗಳು ವಿಫಲರಾಗಿದ್ದಾರೆ ಎಂದು ದೂರಿದರು.

ಹಿಂದೂ ಧರ್ಮದ ಮಠಾಧಿಪತಿಗಳು ಈ ಸಂಬಂಧ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯ ಇದೆ. ಪಾದಯಾತ್ರೆ,ಮೆರವಣಿಗಳ ಮೂಲಕ ಬೂಟಾಟಿಕೆ ಪ್ರದರ್ಶಿಸುತ್ತಿರುವ ಸ್ವಾಮೀಜಿಗಳು ತಮ್ಮ ಮಠಗಳ ಉತ್ತರಾಧಿಕಾರಿಗಳಾಗಿ ದಲಿತ ಅಥವಾ ಶೋಷಿತ ವರ್ಗದವರನ್ನು ನೇಮಿಸಲಿ ಎಂದು ಅವರು ಸವಾಲು ಹಾಕಿದರು.

ಆರ್‌ಎಸ್‌ಎಸ್, ಶಿವಸೇನೆ, ಭಜರಂಗದಳ ಸಂಘಟನೆಗಳು ಹಿಟ್ಲರ್ ನೀತಿಯನ್ನು ಅನುಸರಿಸುತ್ತ ಸಮಾಜದಲ್ಲಿ ಶಾಂತಿ,ಸೌಹಾರ್ದದ ನಾಶಕ್ಕೆ ಕಾರಣವಾಗುತ್ತಿದೆ ಎಂದು ಅವರು ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೇಶಪಾಂಡೆ-ಡಿಕೆಶಿ ಇಂದು ಪಟ್ಟಾಭಿಷೇಕ
ಬಂಧಿತ ಉಗ್ರರು ನಗರ ಸ್ಫೋಟದಲ್ಲೂ ಭಾಗಿ !
ಕುಮಾರಸ್ವಾಮಿ ಸರ್ಕಾರಕ್ಕೆ ಮತ್ತೆ ಸವಾಲ್
ಮಂಡ್ಯ:ಗಾಂಧಿ ಪ್ರತಿಮೆ ತೆರವು-ಪರಿಸ್ಥಿತಿ ಉದ್ವಿಗ್ನ
ಕುಮಾರಸ್ವಾಮಿ ಕ್ಷಮೆಯಾಚನೆಗೆ ಕಟ್ಟಾ ಆಗ್ರಹ
ದಾಳಿ: ಮಠಾಧೀಶರಿಂದ ಶಾಂತಿಯಾತ್ರೆ