ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಂಗಳೂರಿಗೆ ಮತ್ತೆ ಮುಂಬೈ ಪೊಲೀಸ್ ತಂಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಂಗಳೂರಿಗೆ ಮತ್ತೆ ಮುಂಬೈ ಪೊಲೀಸ್ ತಂಡ
ನಗರದಲ್ಲಿ ಬಂಧಿತ ನಾಲ್ವರು ಶಂಕಿತ ಉಗ್ರರನ್ನು ಮುಂಬೈಗೆ ಕರೆದುಕೊಂಡು ಹೋದ ಬೆನ್ನಲ್ಲೇ ಇದೀಗ ಮತ್ತೊಂದು ಮುಂಬೈ ಪೊಲೀಸ್ ತಂಡ ನಗರಕ್ಕೆ ಆಗಮಿಸಿದೆ.

ಶಂಕಿತ ಉಗ್ರರ ವಿಚಾರಣೆಗೊಳಪಡಿಸಿದ ಪೊಲೀಸರು ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ನಗರಕ್ಕೆ ಆಗಮಿಸಿದ್ದು, ತೀವ್ರ ತನಿಖೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ನಾಲ್ವರು ಶಂಕಿತ ಉಗ್ರರೊಂದಿಗೆ ಬಂಧಿಸಲಾಗಿದ್ದ 8 ಮಂದಿಯನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ.

ಈ ನಡುವೆ ಬೆಂಗಳೂರು ಸರಣಿ ಸ್ಫೋಟ ಪ್ರಕರಣದಲ್ಲಿ ಬಂಧಿಯಾಗಿರುವ ಶಂಕಿತ ಉಗ್ರ ಮಹಮ್ಮದ್ ಸಮಿ ಬಿ.ಸಿ.ರೋಡ್‌‌‌ಗೆ ಭೇಟಿ ನೀಡಿರುವ ಸಾಧ್ಯತೆ ಇರುವುದಾಗಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

ಒಂದು ತಿಂಗಳ ಹಿಂದೆ ನಗರದ ವಸತಿ ಗೃಹಕ್ಕೆ ಆಗಮಿಸಿದ್ದ ಈತ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದ. ಈ ಸಂದರ್ಭದಲ್ಲಿ ವಸತಿ ಮಾಲೀಕರು ಈತನನ್ನು ಪೊಲೀಸರಿಗೆ ಒಪ್ಪಿಸಿದ್ದರು ಎನ್ನಲಾಗಿದೆ. ಇದೀಗ ಬಂಧಿಸಲಾಗಿರುವ ವ್ಯಕ್ತಿಯೂ ಇದೇ ಚಹರೆಯನ್ನು ಹೋಲುತ್ತಿದ್ದು, ಆತನೇ ಬಿ.ಸಿ.ರೋಡಿಗೆ ಬಂದ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಪೊಲೀಸರು ಈ ಬಗ್ಗೆ ದೃಢಪಡಿಸಿಲ್ಲ.

ಬೆಂಗಳೂರು ವರದಿ:

ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕರ ಸಂಘಟನೆ ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ಹಬ್ಬಿರುವ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳ ನಡುವೆ ಸಹಕಾರ ಕುರಿತು ಮಹಾರಾಷ್ಟ್ರ ಗೃಹ ಸಚಿವ ಆರ್. ಆರ್. ಪಾಟೀಲ್ ಅವರೊಂದಿಗೆ ರಾಜ್ಯದ ಗೃಹ ಸಚಿವ ವಿ.ಎಸ್. ಆಚಾರ್ಯ ಮಾತುಕತೆ ನಡೆಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಿಲ್ಲಾ ರಚನೆಗೆ ಆಗ್ರಹಿಸಿ ಗೋಕಾಕ್ ಬಂದ್
ರಾಜ್ ಹೆಸರಿನಲ್ಲಿ ವಿವಿ ಸ್ಥಾಪನೆ:ಯಡಿಯೂರಪ್ಪ
ಹಿಂದೂ ಧರ್ಮದ ಲೋಪ ಸರಿಪಡಿಸಿ:ರೇವಣಶ್ರೀ
ದೇಶಪಾಂಡೆ-ಡಿಕೆಶಿ ಇಂದು ಪಟ್ಟಾಭಿಷೇಕ
ಬಂಧಿತ ಉಗ್ರರು ನಗರ ಸ್ಫೋಟದಲ್ಲೂ ಭಾಗಿ !
ಕುಮಾರಸ್ವಾಮಿ ಸರ್ಕಾರಕ್ಕೆ ಮತ್ತೆ ಸವಾಲ್