ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಬೆಂಗಳೂರು ದಕ್ಷಿಣ ಭಾಗದ ಕೊತ್ತನೂರು ಗ್ರಾಮದಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ ಕಟ್ಟಡಗಳನ್ನು ತೆರವುಗೊಳಿಸಿ,20ಕೋಟಿ ರೂ.ಗಳ ಆಸ್ತಿಯನ್ನು ವಶಪಡಿಸಿಕೊಂಡಿದೆ.
ಬೆಂಗಳೂರು ದಕ್ಷಿಣ ತಾಲೂಕು, ಉತ್ತರಹಳ್ಳಿ ಹೋಬಳಿ, ಕೊತ್ತನೂರು ಗ್ರಾಮದಲ್ಲಿ ಎರಡು ಎಕರೆ ಜೆಪಿ ನಗರ 8ನೆ ಬಡಾವಣೆ ನಿರ್ಮಾಣಕ್ಕಾಗಿ ಪ್ರಾಧಿಕಾರ ಅಧಿಸೂಚನೆ ಹೊರಡಿಸಿತ್ತು. ಆದರೆ ಕೆಲವು ರೆವಿನ್ಯೂ ನಿವೇಶನದಾರರು ನ್ಯಾಯಾಲಯದಲ್ಲಿ ದಾವೆ ಹೂಡಿ,ಆರ್‌ಸಿಸಿ ಕಟ್ಟಡ, ಎಸಿ ಶೀಟಿನ ಶಾಲಾ ಕಟ್ಟಡ ಮತ್ತು 20ಎಸಿ ಶೀಟಿನ ಶೆಡ್ಡುಗಳನ್ನು ನಿರ್ಮಿಸಿದ್ದರು.
ನ್ಯಾಯಾಲಯ ತಡೆಯಾಜ್ಞೆ ರದ್ದುಗೊಳಿಸಿದ ನಂತರ ಪ್ರಾಧಿಕಾರವು ಅನಧಿಕೃತವಾಗಿ ನಿರ್ಮಿಸಿದ್ದ ಒಂದು ಆರ್‌ಸಿಸಿ ಕಟ್ಟಡಗಳನ್ನು ಮತ್ತು 20ಎಸಿ ಶೀಟಿನ ಶೆಡ್ಡುಗಳನ್ನು ಕೆಡವಿ ಎರಡು ಎಕರೆ ಭೂಮಿಯನ್ನು ವಶಪಡಿಸಿಕೊಂಡಿದೆ. |