ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕಾಂಗ್ರೆಸ್ಸಿಗರೇ ಸೋಲಿಗೆ ಕಾರಣ: ಖರ್ಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ಸಿಗರೇ ಸೋಲಿಗೆ ಕಾರಣ: ಖರ್ಗೆ
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್ಸಿಗರೇ ಕಾರಣ ಎಂಬ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಇದೀಗ ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ನಾಯಕರ ಈ ಹೇಳಿಕೆ ಕುರಿತು ನೂತನ ಅಧ್ಯಕ್ಷ ಆರ್.ವಿ. ದೇಶಪಾಂಡೆ ತೀವ್ರ ಅಸಹನೆ ವ್ಯಕ್ತಪಡಿಸಿದ್ದಾರೆ. ಖರ್ಗೆ ಮಾತಿನಲ್ಲಿ ಎಷ್ಟು ಸತ್ಯ ಇದೆ ಎನ್ನುವ ಬಗ್ಗೆ ನಾವು ವಿಚಾರ ಮಾಡಿ ನಿರ್ಣಯ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಖರ್ಗೆ ಸಹಾಯದಿಂದಲೇ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ಇರುತ್ತದೆ. ಆದರೆ, ಇದು ಪಕ್ಷದ ಶಕ್ತಿ ಕುಂದಿಸುವ ಮಟ್ಟಕ್ಕೆ ಇಳಿಯಬಾರದೆಂಬುದು ಅವರ ಅಭಿಪ್ರಾಯ.

ದೊಡ್ಡಬಳ್ಳಾಪುರದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಖರ್ಗೆ, ಪಕ್ಷದ ಸೋಲಿಗೆ ಕಾಂಗ್ರೆಸ್‌‌‌ನವರೇ ಕಾರಣ , ಅದನ್ನು ನಾನು ಎದೆ ತಟ್ಟಿ ಹೇಳುತ್ತೇನೆ. ಕಾಂಗ್ರೆಸ್ ಮುಖಂಡರು ಚುನಾವಣೆ ಹೊತ್ತಿಗೆ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದಿದ್ದರೆ ನಾವು ಸೋಲಬೇಕಿರಲಿಲ್ಲ. ಈ ಪರಿಸ್ಥಿತಿಯೂ ಬರುತ್ತಿರಲಿಲ್ಲ ಎಂದು ಹೇಳಿ ಸಭೆ ಒಂದು ಕ್ಷಣ ಸ್ತಂಭೀಭೂತರಾಗುವಂತೆ ಮಾಡಿದರು.

ಈ ಹೇಳಿಕೆಯಿಂದ ಕಾರ್ಯಕರ್ತರು ಮಾತ್ರವಲ್ಲ ಕಾಂಗ್ರೆಸ್ ನಾಯಕರನ್ನು ಕೂಡ ಪೇಚಿಗೆ ಸಿಲುಕಿಸುವಂತೆ ಮಾಡಿತು. ಈ ಕುರಿತು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಖರ್ಗೆ ಮಾತಿನಲ್ಲಿ ಎಷ್ಟು ಸತ್ಯ ಎಷ್ಟು ಸುಳ್ಳಿದೆ ಎಂಬುದನ್ನು ಅವರು ನೀಡಿರುವ ವರದಿಯಿಂದಲೇ ತಿಳಿಯಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರತಿಪಕ್ಷಗಳಿಂದ ಅಭಿವೃದ್ಧಿಗೆ ಅಡ್ಡಿ: ಅನಂತ್‌ ಕುಮಾರ್
ನ್ಯಾನೋ ಯೋಜನೆ ಬಿಡುವ ಪ್ರಶ್ನೆ ಇಲ್ಲ:ಸಿಎಂ
ದಾಳಿ:ರಾಜ್ಯ ಸರ್ಕಾರದ ವಿರುದ್ಧ ಬೃಂದಾ ಕಿಡಿ
ಬಿಡಿಎ ಕಾರ್ಯಾಚರಣೆ-20ಕೋಟಿ ರೂ.ಆಸ್ತಿ ವಶ
ಚರ್ಚ್ ದಾಳಿಯಿಂದ ರಾಜ್ಯಕ್ಕೆ ಅಪಖ್ಯಾತಿ: ದೇಶಪಾಂಡೆ
ಮತ್ತೆ ಮೂವರು ಶಂಕಿತ ಉಗ್ರರ ಬಂಧನ