ಐತಿಹಾಸಿಕ ದಸರಾದ ಉತ್ಸವದಲ್ಲಿ ಗುರುವಾರ ನಡೆಯಲಿರುವ ಜಂಬೂ ಸವಾರಿಗೆ ಕ್ಷಣಗಣನೆ ಆರಂಭಗೊಂಡಿದೆ.ದಸರಾ ಸಂಭ್ರಮದಲ್ಲಿ ಜಂಬೂ ಸವಾರಿ ವಿಶೇಷ ಆಕರ್ಷಣೆಯಾಗಿದ್ದು, ಆ ಕ್ಷಣದ ವೀಕ್ಷಣೆಗಾಗಿ ಸಾವಿರಾರು ಮಂದಿ ವಿದೇಶಿಯರು ಸೇರಿದಂತೆ ದೇಶಿಯ ಪ್ರವಾಸಿಗರು ಕಿಕ್ಕಿರಿದು ಜಮಾಯಿಸಿದ್ದಾರೆ.ಅಲ್ಲದೇ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಸಾಗಲಿರುವ 'ಬಲರಾಮ'ಕೂಡ ಸರ್ವಾಲಂಕಾರದೊಂದಿಗೆ ಸಿದ್ಧಗೊಂಡಿದ್ದು, ಸುಮಾರು 750ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಲಿದೆ.ಎಲ್ಲೆಡೆ ಸರ್ಪಗಾವಲು: ಆಕರ್ಷಕ ಜಂಬೂ ಸವಾರಿಗೆ ಕ್ಷಣಗಣನೆ ಆರಂಭಗೊಂಡ ಹಿನ್ನೆಲೆಯಲ್ಲಿ,ಇದೀಗ ಅರಮನೆ ಸೇರಿದಂತೆ ಎಲ್ಲೆಡೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.ಸುಮಾರು ನಾಲ್ಕು ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಬಾಂಬ್ ಪತ್ತೆ ದಳ,ಶ್ವಾನದಳ ಸೇರಿದಂತೆ ಆರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇಮಿಸುವ ಮೂಲಕ ಈ ಹಿಂದೆಂದೂ ಕಂಡರಿಯದಷ್ಟು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಅಂಗವಾಗಿ ಈ ರೀತಿಯ ಬಿಗಿ ಬಂದೋಬಸ್ತ್ ಕೈಗೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. |
ಸಂಬಂಧಿತ ಮಾಹಿತಿ ಹುಡುಕಿ |
|