ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪ್ರವಾಸಿಗರ ಕಣ್ಮನ ಸೆಳೆದ 'ಜಂಬೂ ಸವಾರಿ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರವಾಸಿಗರ ಕಣ್ಮನ ಸೆಳೆದ 'ಜಂಬೂ ಸವಾರಿ'
ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡೇಶ್ವರಿ ದೇವಿಗೆ ಪೂಜೆ ನೆರವೇರಿಸುವ ಮೂಲಕ, ದಸರಾದ ವಿಶ್ವವಿಖ್ಯಾತ ಜಂಬೂ ಸವಾರಿ ಗುರುವಾರ ಮಧ್ನಾಹ್ನ ಆರಂಭಗೊಳ್ಳುವ ಮೂಲಕ ಲಕ್ಷಾಂತರ ಪ್ರವಾಸಿಗರ ಮನಸೂರೆಗೊಂಡಿತು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಂದಿಧ್ವಜಕ್ಕೆ ಪೂಜೆ ನೆರವೇರಿಸಿ, ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು.ವಿದೇಶಿಯರು ಸೇರಿದಂತೆ ಲಕ್ಷಾಂತರ ಪ್ರವಾಸಿಗರು ಈ ಕಣ್ಮನ ಸೆಳೆಯುವ ದೃಶ್ಯವನ್ನು ವೀಕ್ಷಿಸಿದರು.
News RoomNRB
ಹೈವೇ ವೃತ್ತದ ಮೂಲಕ ಸುಮಾರು 750 ಕೆಜಿ ಚಿನ್ನದ ಅಂಬಾರಿಯನ್ನು ಹೊತ್ತ ಗಜರಾಜ ಬಲರಾಮ ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾಗುವ ಮೂಲಕ ಬನ್ನಿಮಂಟಪಕ್ಕೆ ತೆರಳಿತು.


ಮೆರವಣಿಗೆಯಲ್ಲಿ 41ಸ್ತಬ್ಧ ಚಿತ್ರಗಳು, 50ಕ್ಕೂ ಹೆಚ್ಚು ಜನಪದ ಕಲಾ ತಂಡಗಳು ಆಕರ್ಷಕ ಪ್ರದರ್ಶನಗಳನ್ನು ನೀಡುವ ಮೂಲಕ, ಜಂಬೂ ಸವಾರಿ ವಿಶೇಷ ಆಕರ್ಷಣೆಗೆ ಸಾಕ್ಷಿಯಾಯಿತು.

ಅರಮನೆ ಆವರದಲ್ಲಿಯೇ ಅಂದಾಜು ಹತ್ತು ಸಾವಿರ ಮಂದಿಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಲೋಹ ಶೋಧಕ ಯಂತ್ರ,ಸಿಸಿ ಕ್ಯಾಮರ ಅಳವಡಿಕೆ ಮಾಡಿದ್ದಲ್ಲದೆ, ಎಲ್ಲೆಡೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಜಂಬೂ ಸವಾರಿ'ಗೆ ಕ್ಷಣಗಣನೆ
ನಟ ವಿನೋದ್ ಹತ್ಯೆ:ಸಿಓಡಿ ತನಿಖೆಗೆ ಚಿಂತನೆ
ಕುರ್ಚಿಗಾಗಿ ಆಸೆ ಪಟ್ಟವನಲ್ಲ:ಸಿದ್ದರಾಮಯ್ಯ
ಗಂಗೂಲಿ ನಿವೃತ್ತಿ ಸೂಕ್ತ ನಿರ್ಧಾರ: ಶ್ರೀಕಾಂತ್
ಗೌಡರ ಬಲಗೈ ಬಂಟ ಮೇರಾಜುದ್ದೀನ್
ಗೋಕರ್ಣ ಹಸ್ತಾಂತರ: ಸರ್ಕಾರಕ್ಕೆ ನೋಟಿಸ್