ಚಂದ್ರಲೇಔಟ್ ಕಲ್ಯಾಣ ನಗರದಲ್ಲಿರುವ ಮಹಾಲಕ್ಷ್ಮಿ ಜುವೆಲ್ಸ್ ಅಂಗಡಿಗೆ ಇಬ್ಬರು ದರೋಡೆಕೋರರು ನುಗ್ಗಿ ಅಂಗಡಿಯಲ್ಲಿದ್ದ ಮಾಲೀಕರ ಮಗನನ್ನು ನೂಕಿ 12ಲಕ್ಷ ರೂ. ಬೆಲೆಯ ಚಿನ್ನದ ಆಭರಣಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಕಲ್ಯಾಣನಗರ 3ನೇ ಮುಖ್ಯರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ದರೋಡೆ ಪ್ರಕರಣ ನಡೆದಿದೆ ಎಂದು ಸುಭಾಷ್ ಎನ್ನುವವರು ಚಂದ್ರಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಎರಡು ಬಾಕ್ಸ್‌ಗಳಲ್ಲಿದ್ದ ಚಿನ್ನದ ಒಡವೆಗಳನ್ನು ಟೇಬಲ್ ಮೇಲಿಟ್ಟು ಷೋಬಾಕ್ಸ್‌ಗಳಿಗೆ ಮರು ಜೋಡಣೆ ಮಾಡುತ್ತಿರುವಾಗ ಹಠಾತ್ ಒಳಗೆ ನುಗ್ಗಿದ ಸುಮಾರು 25 ವರ್ಷದ ದುಷ್ಕರ್ಮಿಗಳು ಕನ್ನಡ ಮಾತನಾಡಿ,ಮೊಬೈಲ್ ಗಿರವಿ ಇಟ್ಟುಕೊಳ್ಳುವಂತೆ ಒತ್ತಾಯಿಸಿದರು.
ಸುಭಾಷ್ ಮೊಬೈಲ್ ಗಿರವಿ ಇಟ್ಟುಕೊಳ್ಳುವುದಿಲ್ಲ ಎಂದು ಹೇಳಿದ ಮೇಲೆ ಹೊರಗೆ ಹೋಗಿ ನಿಂತ ಆರೋಪಿಗಳು ಸ್ವಲ್ಪ ಹೊತ್ತಿನಲ್ಲಿಯೇ ಮತ್ತೆ ಒಳಗೆ ಬಂದು ಸುಭಾಶ್‌ನನ್ನು ಕೆಳಗೆ ತಳ್ಳಿ ಟೇಬಲ್ ಮೇಲಿದ್ದ ಎರಡು ಚಿನ್ನದ ಒಡವೆ ಬಾಕ್ಸ್‌ಗಳನ್ನು ಎತ್ತಿಕೊಂಡು ಪರಾರಿಯಾದರೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. |