ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮನೆ ತೆರಿಗೆ ಹೆಚ್ಚಳಕ್ಕೆ ಸಿಪಿಐ(ಎಂ) ವಿರೋಧ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮನೆ ತೆರಿಗೆ ಹೆಚ್ಚಳಕ್ಕೆ ಸಿಪಿಐ(ಎಂ) ವಿರೋಧ
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಿವಿಎಸ್ ಬದಲಿಗೆ ಎಸ್‌ಎಎಸ್ ತೆರಿಗೆ ಪದ್ಧತಿಯನ್ನು ಶೇ.20ರಷ್ಟು ಹೆಚ್ಚಳ ಮಾಡಿರುವುದನ್ನು ಸಿಪಿಐ(ಎಂ) ತೀವ್ರವಾಗಿ ಖಂಡಿಸಿದೆ.

ಈಗಿರುವ 7 ಲಕ್ಷ ಆಸ್ತಿಗಳಿಗೆ ತೆರಿಗೆ ಪಾವತಿಯಾಗುತ್ತಿದ್ದು, ಅದನ್ನು 15 ಲಕ್ಷಗಳಿಗೆ ವಿಸ್ತರಿಸಿ ವರ್ಷಕ್ಕೆ 1500ಕೋಟಿ ರೂ. ತೆರಿಗೆ ಸಂಗ್ರಹಿಸುವ ತೀರ್ಮಾನವನ್ನು ಸರ್ಕಾರ ಮಾಡಿದೆ.

ತೆರಿಗೆ ಪಾವತಿದಾರರ ಸಂಖ್ಯೆಯನ್ನು ಹೆಚ್ಚಿಸುವ ಮೂಲಕವೇ ಆದಾಯದ ಪ್ರಮಾಣವನ್ನು ಹೆಚ್ಚಿಸಲು ಸಾಧ್ಯವಿರುವಾಗ ತೆರಿಗೆಯನ್ನು ಶೇ.20ಕ್ಕೆ ಏರಿಸುವ ಅಗತ್ಯ ಇಲ್ಲ. ಹೀಗಾಗಿ ತೆರಿಗೆ ಹೆಚ್ಚಳವನ್ನು ಕೈಬಿಡಬೇಕೆಂದು ಪಕ್ಷದ ಕಾರ್ಯದರ್ಶಿ ಕೆ.ಪ್ರಕಾಶ್ ಆಗ್ರಹಿಸಿದ್ದಾರೆ.

ತೆರಿಗೆಯನ್ನು ವಂಚಿಸುತ್ತಿರುವ ದೊಡ್ಡ ಕುಳಗಳಿಂದ ಮುಲಾಜಿಲ್ಲದೆ ವಸೂಲಿ ಮಾಡುವ ಶಕ್ತಿಯನ್ನು ಸರ್ಕಾರ ಪ್ರದರ್ಶಿಸಿದರೆ ಸಾಕಷ್ಟು ಸಂಗ್ರಹವಾಗುತ್ತದೆ ಎಂದಿರುವ ಬಿಜೆಪಿ ಸರ್ಕಾರ ಹಿಂಬಾಗಿಲಿನಿಂದ ಸುಲಿಗೆ ಮಾಡುವ ಕ್ರಮವನ್ನು ಕೈಬಿಡಬೇಕು ಎಂದು ಆಗ್ರಹಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಂಬೂ ಸವಾರಿಯೊಂದಿಗೆ 'ದಸರಾಕ್ಕೆ ತೆರೆ'
ಜೆಡಿಎಸ್ ಮೈತ್ರಿಗೆ ಸಿದ್ದರಾಮಯ್ಯ ಅಪಸ್ವರ
ಹಾಡಹಗಲೇ 12 ಲಕ್ಷ ರೂ. ದರೋಡೆ
ಕಾಂಗ್ರೆಸ್‌‌ಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ:ಸಿಎಂ
ಪ್ರವಾಸಿಗರ ಕಣ್ಮನ ಸೆಳೆದ 'ಜಂಬೂ ಸವಾರಿ'
'ಜಂಬೂ ಸವಾರಿ'ಗೆ ಕ್ಷಣಗಣನೆ