ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮರುಚುನಾವಣೆ: ಜೆಡಿಎಸ್ ಪ್ರಥಮ ಪಟ್ಟಿ ಅಂತಿಮ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮರುಚುನಾವಣೆ: ಜೆಡಿಎಸ್ ಪ್ರಥಮ ಪಟ್ಟಿ ಅಂತಿಮ
ಮರು ಚುನಾವಣೆ ನಡೆಯಲಿರುವ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದೆ.

ಜೆಡಿಎಸ್ ಶಾಸಕ ಸಿದ್ದರಾಜು ನಿಧನದಿಂದ ತೆರವಾಗಿರುವ ಮದ್ದೂರು ಕ್ಷೇತ್ರದಿಂದ ಕಲ್ಪನಾ ಸಿದ್ದರಾಜು ಸ್ಪರ್ಧಿಸಲಿದ್ದಾರೆ. ಮಾಜಿ ಸಚಿವ ಚೆಲುವರಾಯಸ್ವಾಮಿ ದೊಡ್ಡಬಳ್ಳಪುರದಿಂದ ಕಣಕ್ಕಿಳಿಯಲಿದ್ದಾರೆ.

ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ತುರುವೇಕರೆಯಿಂದ ಕಣಕ್ಕಿಳಿಯಲಿದ್ದಾರೆ ಎಂಬುದು ಖಚಿತವಾಗಿದೆ. ಅಂತೆಯೇ, ಮಧುಗಿರಿ ಕ್ಷೇತ್ರದಿಂದ ಅಧಿಕಾರಿಯೊಬ್ಬರನ್ನು ಕಣಕ್ಕಿಳಿಸಲು ಜೆಡಿಎಸ್ ಚಿಂತನೆ ನಡೆಸಿದೆ.

ಬಾಕಿ ಉಳಿದಿರುವ ನಾಲ್ಕು ಕ್ಷೇತ್ರಗಳಿಗೆ ಇನ್ನು ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿಲ್ಲ. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮರು ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.

ಮೈತ್ರಿ ಕುರಿತು ಕಾಂಗ್ರೆಸ್ ನೊಂದಿಗೆ ಇದುವರೆಗೆ ಮಾತುಕತೆ ನಡೆದಿಲ್ಲ. ಒಂದು ವೇಳೆ ಆ ಪಕ್ಷದ ನಾಯಕರು ಒಲವು ವ್ಯಕ್ತಪಡಿಸಿದರೆ ಮೈತ್ರಿಗೆ ಮುಂದಾಗಬಹುದು ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಪ ಚುನಾವಣೆಯಿಂದ ದೂರ: ಬಂಗಾರಪ್ಪ
ಮನೆ ತೆರಿಗೆ ಹೆಚ್ಚಳಕ್ಕೆ ಸಿಪಿಐ(ಎಂ) ವಿರೋಧ
ಜಂಬೂ ಸವಾರಿಯೊಂದಿಗೆ 'ದಸರಾಕ್ಕೆ ತೆರೆ'
ಜೆಡಿಎಸ್ ಮೈತ್ರಿಗೆ ಸಿದ್ದರಾಮಯ್ಯ ಅಪಸ್ವರ
ಹಾಡಹಗಲೇ 12 ಲಕ್ಷ ರೂ. ದರೋಡೆ
ಕಾಂಗ್ರೆಸ್‌‌ಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ:ಸಿಎಂ