ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಿಬಿಎಂಪಿ ಚುನಾವಣೆ ವಿಳಂಬಕ್ಕೆ ಜೆಡಿಯು ಟೀಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಬಿಎಂಪಿ ಚುನಾವಣೆ ವಿಳಂಬಕ್ಕೆ ಜೆಡಿಯು ಟೀಕೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸದೇ ಉಚ್ಚ ನ್ಯಾಯಾಲಯದಿಂದ ನಿಂದನೆಗೆ ಗುರಿಯಾಗಿರುವ ರಾಜ್ಯ ಸರ್ಕಾರದ ವರ್ತನೆಯನ್ನು ಸಂಯುಕ್ತ ಜನತಾದಳ ತೀವ್ರವಾಗಿ ಖಂಡಿಸಿದೆ.

ಮೂರು ತಿಂಗಳೊಳಗೆ ಚುನಾವಣೆ ನಡೆಸುವಂತೆ ಉಚ್ಚ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇಚ್ಚೆ ಇದ್ದರೆ ಸರ್ಕಾರ ಚುನಾವಣೆ ನಡೆಸಬಹುದಿತ್ತು ಎಂದು ತಿಳಿಸಿದೆ.

ವಾರ್ಡ್ ವಿಂಗಡಣೆ, ಮೀಸಲಾತಿ ನಿಗದಿ ಹಾಗೂ ಮತದಾರರ ಪಟ್ಟಿ ತಯಾರಿಕೆ ಅಸಾಧ್ಯವಾದ ಕೆಲಸವಾಗಿರಲಿಲ್ಲ. ಹಣಕಾಸು ಸಂಪನ್ಮೂಲದ ಕೊರತೆಯೂ ಇರಲಿಲ್ಲ. ಆದರೂ ಚುನಾವಣೆ ನಡೆಸದೇ ವಿಳಂಬ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೆಕೆಸಿ ರೆಡ್ಡಿ ಟೀಕಿಸಿದ್ದಾರೆ.

ಚುನಾವಣೆಯನ್ನು ವಿಳಂಬ ಮಾಡುವುದು ಪ್ರಜಾಪ್ರಭುತ್ವದ ತತ್ವ ಸಿದ್ದಾಂತ ಹಾಗೂ ಜನರ ಹಿತಾಸಕ್ತಿಗಳಿಗೆ ವಿರುದ್ಧವಾದುದು. ನಗರ ಪಾಲಿಕೆ ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಕುಖ್ಯಾತರಾಗಿದ್ದಾರೆ. ಪಾಲಿಕೆಯ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಕೂಡಲೇ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮರುಚುನಾವಣೆ: ಜೆಡಿಎಸ್ ಪ್ರಥಮ ಪಟ್ಟಿ ಅಂತಿಮ
ಉಪ ಚುನಾವಣೆಯಿಂದ ದೂರ: ಬಂಗಾರಪ್ಪ
ಮನೆ ತೆರಿಗೆ ಹೆಚ್ಚಳಕ್ಕೆ ಸಿಪಿಐ(ಎಂ) ವಿರೋಧ
ಜಂಬೂ ಸವಾರಿಯೊಂದಿಗೆ 'ದಸರಾಕ್ಕೆ ತೆರೆ'
ಜೆಡಿಎಸ್ ಮೈತ್ರಿಗೆ ಸಿದ್ದರಾಮಯ್ಯ ಅಪಸ್ವರ
ಹಾಡಹಗಲೇ 12 ಲಕ್ಷ ರೂ. ದರೋಡೆ