ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಠಕ್ಕೆ ನೆರವು ನೀಡಿದರೆ ತಪ್ಪೇನು: ಯಡಿಯೂರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಠಕ್ಕೆ ನೆರವು ನೀಡಿದರೆ ತಪ್ಪೇನು: ಯಡಿಯೂರಪ್ಪ
ಮಠ, ಮಂದಿರಗಳು ಸರ್ಕಾರದ ಕೆಲಸಗಳನ್ನೇ ಮಾಡುತ್ತಿರುವುದರಿಂದ ಅವರಿಗೆ ಅನುಕೂಲ ಮಾಡಿಕೊಡುವುದರಲ್ಲಿ ತಪ್ಪೇನಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಟುವಾಗಿ ಪ್ರಶ್ನಿಸಿದ್ದಾರೆ.

ಮಠ-ಮಾನ್ಯಗಳನ್ನೇ ಓಲೈಸುವುದರಲ್ಲಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾಲಹರಣ ಮಾಡುತ್ತಿದ್ದಾರೆಂದು ಮಾಜಿ ಸಿಎಂ ಬಂಗಾರಪ್ಪ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ತಿರುಗೇಟು ನೀಡಿದ್ದಾರೆ.

ಅವರು ಶುಕ್ರವಾರ ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರ ಸುಂದರ ಉಡುಪಿ ಕೃಷ್ಣನ ಉಡುಪಿ ಯೋಜನೆಯ ಮೊದಲ ಹಂತವಾಗಿ ನಿರ್ಮಾಣಗೊಳ್ಳಲಿರುವ ನೂತನ ಅನ್ನಬ್ರಹ್ಮ ಸೇವಾ ಸಮುಚ್ಚಯ ಅನ್ನಬ್ರಹ್ಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಪರ್ಯಾಯ ಮಠಾಧೀಶರ 3ಕೋಟಿ ರೂ. ಮೊತ್ತದ ಈ ಯೋಜನೆಗೆ ಸರ್ಕಾರದಿಂದ 50ಲಕ್ಷ ರೂಪಾಯಿ ನೆರವು ನೀಡುವುದಾಗಿ ಘೋಷಿಸಿದರು.

ಕನಕನಿಗೆ ದರ್ಶನ ನೀಡಿದ ಕೃಷ್ಣನ ಉಡುಪಿಯಲ್ಲಿ ಕನಕಾಧ್ಯಯನ ಪೀಠ ಸ್ಥಾಪಿಸಿ ಒಂದು ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಪ್ರತಿವರ್ಷ ನವಂಬರ್ 15ರಂದು ಕನಕಜಯಂತಿಯನ್ನು ಸರ್ಕಾರದ ವತಿಯಿಂದ ಉಡುಪಿ ಮತ್ತು ಬಾಡಾದಲ್ಲಿ ವಿಶಿಷ್ಟವಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದೆ.

ಬರುವ ನವೆಂಬರ್ 15ರಂದು ಈ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ ಎಂದು ಹೇಳಿದರು. ನಾಡಿನ ಸರ್ವಾಂಗೀಣ ಪ್ರಗತಿಗೆ ಬದ್ದವಾಗಿರುವ ಸರ್ಕಾರ ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಪಶ್ಚಿಮಘಟ್ಟ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿದಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೆಪಿಸಿಸಿ ಪುನರ್ ರಚನೆ ಅಧ್ಯಕ್ಷರಿಗೆ ಸವಾಲು
ಶೀಘ್ರವೇ ನೂತನ ಅಧ್ಯಕ್ಷರ ನೇಮಕ:ಜೆಡಿಎಸ್
ವಿಧಾನಸಭೆ ವಿಸರ್ಜನೆಗೆ ಧರಂ ಸವಾಲ್
ಲೋಕಸಭೆ ಚುನಾವಣೆ:ಎಸ್ಪಿ-ಕಾಂಗ್ರೆಸ್ ಮೈತ್ರಿ
ಕೋಮುವಾದಿ ಸಂಘಟನೆ ನಿಷೇಧಿಸಬೇಕು:ಖಾನ್
ಶ್ವೇತಪತ್ರಕ್ಕೆ ಜೆಡಿಎಸ್ ಆಗ್ರಹ