ಬಾಗಲೂರು ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಾದೇಶ ಚಿತ್ರದ ನಿರ್ಮಾಪಕ ಗೋವರ್ಧನ ಮೂರ್ತಿಯನ್ನು ಕೇರಳದ ಕೊಚ್ಚಿನ್‌ನಲ್ಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.ಈಶಾನ್ಯ ವಲಯದ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಕೇರಳದ ರಹಸ್ಯ ಸ್ಥಳದಲ್ಲಿ ಅವಿತುಕೊಂಡಿದ್ದ ಗೋವರ್ಧನ ಮೂರ್ತಿಯನ್ನು ಬಂಧಿಸಿದ್ದು, ಇಂದೇ ನಗರಕ್ಕೆ ತರಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಕಳೆದ ಮಂಗಳವಾರದಿಂದ ಕೇರಳದಲ್ಲೇ ಅಡಗಿದ್ದ ಮೂರ್ತಿ ತನ್ನಲ್ಲಿದ್ದ ಹಣ ಖರ್ಚಾದ ಕೂಡಲೇ ತಾನೇ ನೇಮಿಸಿಕೊಂಡಿದ್ದ ಮ್ಯಾನೇಜರ್ ಗೆ ಫೋನ್ ಮಾಡಿ 25 ಲಕ್ಷ ರೂ. ತರುವಂತೆ ಹೇಳಿದ್ದು, ಪೊಲೀಸರಿಗೆ ಬಂಧಿಸುವಲ್ಲಿ ಸಹಾಯವಾಯಿತು.ಶೂಟೌಟ್ ನಡೆದ ಬಳಿಕ ಮೂರ್ತಿ ಮನೆ, ಕಚೇರಿ ಹಾಗೂ ಆತನೊಂದಿಗೆ ಸಂಪರ್ಕ ಹೊಂದಿರುವ ಫೋನ್‌ಗಳ ಹೊರ ಹಾಗೂ ಒಳ ಬರುವ ಕರೆಗಳ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ಮ್ಯಾನೇಜರ್ ಮಾಡಿದ ಕರೆ ಆಧರಿಸಿ ಕೇರಳಕ್ಕೆ ತೆರಳಿದ್ದರು.ಗೋವರ್ಧನ ಮೂರ್ತಿ ತನ್ನ ಸ್ನೇಹಿತ ಹಾಗೂ ಸಹನಟ ವಿನೋದ್ ಕುಮಾರ್ ನನ್ನು ಅಕ್ಟೋಬರ್ 7ರಂದು ಗುಂಡಿಕ್ಕಿ ಕೊಲೆಗೈದ ಆರೋಪದಲ್ಲಿ ಭಾಗಿಯಾಗಿದ್ದಾರೆ. |
|