ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಕ್ರಮಕ್ಕೆ ಕಟ್ಟಿದ ಹಣ ವಾಪಸ್:ಮಹಾನಗರ ಪಾಲಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಕ್ರಮಕ್ಕೆ ಕಟ್ಟಿದ ಹಣ ವಾಪಸ್:ಮಹಾನಗರ ಪಾಲಿಕೆ
ರಾಜ್ಯ ಸರ್ಕಾರ ಅಕ್ರಮ-ಸಕ್ರಮ ಯೋಜನೆಗೆ ಇನ್ನೂ ಹಲವಾರು ಸುಧಾರಣೆಗಳನ್ನು ತರುವ ಹಿನ್ನೆಲೆಯಲ್ಲಿ ಈಗಾಗಲೇ ಸಕ್ರಮಕ್ಕಾಗಿ ಕಟ್ಟಿರುವ ಹಣವನ್ನು ನಾಗರಿಕರಿಗೆ ವಾಪಸ್ ಮಾಡಲು ಮಹಾನಗರ ಪಾಲಿಕೆ ನಿರ್ಧರಿಸಿದೆ.

ಕಳೆದ ಮಾರ್ಚ್ ತಿಂಗಳಿಂದ ಅಕ್ರಮ-ಸಕ್ರಮ ಯೋಜನೆಯಡಿ ಕಟ್ಟಿದ್ದ ಶುಲ್ಕವನ್ನು,ನಿಗದಿತ ದಾಖಲೆಗಳನ್ನು ಒದಗಿಸಿ ಹಣವನ್ನು ವಾಪಸ್ ಪಡೆಯಲು ಈ ತಿಂಗಳ 15 ರಿಂದ 30ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಪ್ರತಿದಿನ ಬೆಳಿಗ್ಗೆ 11ರಿಂದ ಮಧ್ನಾಹ್ನ 1ಗಂಟೆಯವರೆಗೆ,ಮಧ್ನಾಹ್ನ 2.30ರಿಂದ 5ಗಂಟೆವರೆಗೆ ಹಣ ವಾಪಸ್ ಪಡೆಯಬಹುದು. ಇದಕ್ಕಾಗಿ ಬಿಬಿಎಂಪಿ ಕೇಂದ್ರ ಕಚೇರಿಯ ಡಾ.ರಾಜ್‌ಕುಮಾರ್ ಗಾಜಿನ ಮನೆಯಲ್ಲಿ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದೆ.

ರಾಜ್ಯ ಸರ್ಕಾರ ಅಕ್ರಮ-ಸಕ್ರಮ ಯೋಜನೆಯನ್ನು ಜಾರಿಗೆ ತರುವ ನಿರ್ಧಾರ ಪ್ರಕಟಿಸುತ್ತಿದ್ದಂತೆಯೇ ನೂರಾರು ನಾಗರಿಕರು ತಮ್ಮ ಅನಧಿಕೃತ ಕಟ್ಟಡ, ಮನೆಗಳನ್ನು ಸಕ್ರಮಗೊಳಿಸುವುದಕ್ಕಾಗಿ ಸಾಲ-ಸೋಲ ಮಾಡಿ ಸಾವಿರಾರು ರೂಪಾಯಿ ಶುಲ್ಕ ಕಟ್ಟಿದ್ದರು.

ಆದರೆ ಸರ್ಕಾರದ ವಿಳಂಬ ನೀತಿಯಿಂದಾಗಿ ಮಾಡಿರುವ ಸಾಲಕ್ಕೆ ಬಡ್ಡಿ ಕಟ್ಟಲಾಗದೆ ಅತಂತ್ರ ಸ್ಥಿತಿ ತಲುಪಿರುವ ನಾಗರಿಕರು ಹಣ ವಾಪಸು ಮಾಡುವಂತೆ ಪಾಲಿಕೆಗೆ ದುಂಬಾಲು ಬಿದ್ದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
8 ಮಂದಿ ಡಕಾಯಿತರ ಬಂಧನ
ಶೂಟೌಟ್ ಪ್ರಕರಣ:ಗೋವರ್ಧನ ಮೂರ್ತಿ ಬಂಧನ
ರಾಜ್ಯ ದಿವಾಳಿಯಾಗುತ್ತೆ: ಬಂಗಾರಪ್ಪ ಆರೋಪ
ದತ್ತಗುಹೆ ಪ್ರವೇಶಕ್ಕೆ ಜಿಲ್ಲಾಡಳಿತ ನಿಷೇಧ
ಕೆಪಿಎಸ್‌ಸಿ ಮತ್ತು ಸರ್ಕಾರಕ್ಕೆ ನೋಟಿಸ್
ಅಸ್ನೋಟಿಕರ್ ವಿರುದ್ಧ ಕ್ರಿಮಿನಲ್ ಕೇಸು