ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಜೆಟ್‌‌ನಲ್ಲಿ ಅನ್ಯಾಯವಾಗಿದ್ದರೆ ನಿವೃತ್ತಿ: ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಜೆಟ್‌‌ನಲ್ಲಿ ಅನ್ಯಾಯವಾಗಿದ್ದರೆ ನಿವೃತ್ತಿ: ಸಿಎಂ
ಹಣಕಾಸು ಖಾತೆಯ ಜವಾಬ್ದಾರಿ ವಹಿಸಿಕೊಂಡು ತಾವು ಮಂಡಿಸಿದ ಮೂರು ಬಜೆಟ್‌‌ಗಳಲ್ಲಿ ಯಾವುದಾದರೂ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದಾರೆ.

ಜಿಲ್ಲೆಯ ಹೊಳಲ್ಕೆರೆಯ ಒಂಟಿಕಂಬದ ಮುರುಘಾಮಠದಲ್ಲಿ ಶನಿವಾರ ನಡೆದ ಲಿಂಗೈಕ್ಯ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡಿನ ಆರು ಕೋಟಿ ಜನರ ಆಶಯವನ್ನು ಸರ್ಕಾರ ಅರ್ಥಮಾಡಿಕೊಂಡು ನೆಮ್ಮದಿಯ ಬದುಕು ಸಾಗಿಸುವ ವಾತಾವರಣವನ್ನು ಕಲ್ಪಿಸುವ ಯತ್ನ ನಡೆಸಿದೆ ಎಂದರು.

ಸರ್ಕಾರದ ಮುಂದೆ ಹಲವು ರೀತಿಯ ಸವಾಲುಗಳಿವೆ. ಸವಾಲುಗಳನ್ನು ಎದುರಿಸಲು ಸರ್ಕಾರ ಸಮರ್ಥವಾಗಿದೆ. ಆದರೆ, ನಮ್ಮವರೇ ನಮ್ಮ ಬೆನ್ನಿಗೆ ಚೂರಿ ಹಾಕುತ್ತಾರೆ. ಒಳ್ಳಯದನ್ನು ಒಳ್ಳೆಯದು ಅಂತ ಹೇಳಬೇಕು ಎಂದು ಯಾವುದೇ ವ್ಯಕ್ತಿ ಹೆಸರು ಹೇಳದೇ ಪ್ರಸ್ತಾಪಿಸಿದರು.

ಭಯೋತ್ಪಾದನೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿದ್ದರೆ ದೇಶದ ಪ್ರಗತಿ ಸಾಧ್ಯವಿಲ್ಲ. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳಿಗೆ ಭಯೋತ್ಪಾದಕರು ನುಸುಳುತ್ತಿರುವುದು ಆತಂಕ ತಂದಿದೆ.

ದೇಶದ್ರೋಹಿ ಚಟುವಟಿಕೆಗಳನ್ನು ಹತ್ತಿಕ್ಕದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ರಾಷ್ಟ್ರೀಯ ಭಾವೈಕ್ಯ ಸಮಿತಿ ಸಭೆಯಲ್ಲಿ ಪ್ರಧಾನಿಯವರಿಗೆ ಸ್ಪಷ್ಟವಾಗಿ ತಿಳಿಸುತ್ತೇನೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೈತ್ರಿಗೆ ರೆಡಿ: ಕುಮಾರಸ್ವಾಮಿ ಪುನರುಚ್ಚಾರ
ಭಾವಚಿತ್ರದ ಮತದಾರರ ಪಟ್ಟಿ: ಆಯೋಗ
ಸಕ್ರಮಕ್ಕೆ ಕಟ್ಟಿದ ಹಣ ವಾಪಸ್:ಮಹಾನಗರ ಪಾಲಿಕೆ
8 ಮಂದಿ ಡಕಾಯಿತರ ಬಂಧನ
ಶೂಟೌಟ್ ಪ್ರಕರಣ:ಗೋವರ್ಧನ ಮೂರ್ತಿ ಬಂಧನ
ರಾಜ್ಯ ದಿವಾಳಿಯಾಗುತ್ತೆ: ಬಂಗಾರಪ್ಪ ಆರೋಪ