ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಜೆಡಿಎಸ್- ಕಾಂಗ್ರೆಸ್ ಮೈತ್ರಿ ಇಂಗಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಡಿಎಸ್- ಕಾಂಗ್ರೆಸ್ ಮೈತ್ರಿ ಇಂಗಿತ
ಮತ್ತೆ ಜೆಡಿಎಸ್- ಕಾಂಗ್ರೆಸ್ ಕೈಜೋಡಿಸುವ ಇಂಗಿತ ವ್ಯಕ್ತಪಡಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಇದೀಗ ಹೊಸ ಶಕೆ ಆರಂಭವಾಗಲಿದೆಯೇ ಎಂಬ ಮಾತುಗಳು ಕೇಳಿ ಬರುತ್ತಿದೆ.

ಕೆಪಿಸಿಸಿ ನೂತನ ಅಧ್ಯಕ್ಷ ಆರ್.ವಿ,.ದೇಶಪಾಂಡೆ ಜೆಡಿಎಸ್ ಜತೆ ಮೈತ್ರಿಗೆ ಕಾಂಗ್ರೆಸ್ ಮುಕ್ತ ಮನಸ್ಸು ಹೊಂದಿದೆ ಎಂದು ನಗರದಲ್ಲಿ ಸುದ್ದಿಗಾರರೊಂದಿಗೆ ಹೇಳಿದ್ದಾರೆ. ಈ ನಡುವೆ ಜೆಡಿಎಸ್ ಧುರೀಣ ಕುಮಾರಸ್ವಾಮಿ ಈ ಸಂಬಂಧ ತಮ್ಮ ಪಕ್ಷವೂ ಆಸಕ್ತವಾಗಿದೆ ಎಂಬ ಸಂದೇಶ ರವಾನಿಸಿದ್ದಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಮತ್ತೆ ಎರಡೂ ಪಕ್ಷಗಳು ಮೈತ್ರಿಯ ಹಾದಿಯನ್ನು ತುಳಿಯುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಇನ್ನೇನು ಕೆಲ ತಿಂಗಳುಗಳಲ್ಲೇ ನಡೆಯಲಿರುವ ಉಪ ಚುನಾವಣೆ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ಒಟ್ಟಾಗಿ ಬಿಜೆಪಿಯನ್ನು ಬಗ್ಗು ಬಡಿಯಲು ಶತಾಯಗತಾಯ ಪ್ರಯತ್ನ ನಡೆಸಿದ್ದು ಈ ಹಿನ್ನೆಲೆಯಲ್ಲಿ ಈ ಮೈತ್ರಿ ಅನಿವಾರ್ಯ ಎಂಬುದು ಎರಡೂ ಪಕ್ಷಗಳ ಹಿರಿಯರ ಅಭಿಪ್ರಾಯ.

ಒಟ್ಟಾರೆ ಜೆಡಿಎಸ್- ಕಾಂಗ್ರೆಸ್ ಹೊಂದಾಣಿಕೆ ರಾಜ್ಯರಾಜಕೀಯದಲ್ಲಿ ಯಾವ ಪರಿಣಾಮ ಬೀರಲಿದೆ ಎಂಬುದು ಕುತೂಹಲಕರವಾದ ಅಂಶ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಠಗಳು ಹಣ ಸುಲಿಗೆಯ ಕೇಂದ್ರ: ಶಾಂತವೀರಶ್ರೀ
ತನಿಖೆಗೆ ಹೆದರುವುದಿಲ್ಲ: ರೇವಣ್ಣ
ಆಸ್ನೋಟಿಕರ್ ವಿರುದ್ಧ ದೇಶಪಾಂಡೆ ಸ್ಪರ್ಧಿಸಲಿ:ಧನಂಜಯ್
ಮೈತ್ರಿಗೆ ಮುಕ್ತ ಮನಸ್ಸು: ದೇಶಪಾಂಡೆ
ಬಜೆಟ್‌‌ನಲ್ಲಿ ಅನ್ಯಾಯವಾಗಿದ್ದರೆ ನಿವೃತ್ತಿ: ಸಿಎಂ
ಮೈತ್ರಿಗೆ ರೆಡಿ: ಕುಮಾರಸ್ವಾಮಿ ಪುನರುಚ್ಚಾರ