ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದಿಲೀಪ್ ಹತ್ಯೆಯಲ್ಲಿ ದೇಶಪಾಂಡೆ ಕೈವಾಡ:ಶುಭಲತಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಿಲೀಪ್ ಹತ್ಯೆಯಲ್ಲಿ ದೇಶಪಾಂಡೆ ಕೈವಾಡ:ಶುಭಲತಾ
ನನ್ನ ಪತಿಯ ಹತ್ಯೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರ ಕೈವಾಡವಿರುವ ಶಂಕೆಯಿದೆ ಎಂದು ವಿಧಾನಪರಿಷತ್ ಸದಸ್ಯೆ ಶುಭಲತಾ ಆಸ್ನೋಟಿಕರ್ ಗಂಭೀರವಾಗಿ ಆರೋಪಿಸಿದ್ದಾರೆ.

ನಮ್ಮ ಕುಟುಂಬದೊಂದಿಗೆ ಅತ್ಯಂತ ನಿಕಟವಾಗಿದ್ದ ದೇಶಪಾಂಡೆಯವರು ದಿಲೀಪ್ ಆಸ್ನೋಟಿಕರ್ ಹತ್ಯೆಯಲ್ಲಿ ನಮ್ಮ ಕುಟುಂಬದ ಪಾತ್ರವಿದೆ ಎಂದು ಈಗ ಹೇಳುತ್ತಿದ್ದಾರೆ. ಅವರು ಈ ಹಿಂದೆ ಯಾಕೆ ಆರೋಪಿಸಿಲ್ಲ ಎಂದು ಗಂಭೀರ ಪ್ರಶ್ನೆ ಎಸೆದಿರುವ ಶುಭಲತಾ, ಪಕ್ಷ ತೊರೆದು ಹೋದುದ್ದರಿಂದಲೇ ನನ್ನ ಮಗ ಆನಂದ ಆಸ್ನೋಟಿಕರ್ ಅವರ ವಿರುದ್ಧ ದೇಶಪಾಂಡೆ ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಅಧಿಕಾರಕ್ಕಾಗಿ ಅನುಕೂಲಸಿಂಧು ರಾಜಕಾರಣ ಮಾಡುವ ದೇಶಪಾಂಡೆಯವರಿಂದ ಕಲಿಯಬೇಕಿರುವುದು ಏನೂ ಇಲ್ಲ. ಆನಂದ್ ಕಿರಿಯ ವಯಸ್ಸಿನಲ್ಲೇ ಸಚಿವನಾಗಿದ್ದಾನೆ ಎನ್ನುವ ಅಸೂಯೆಯಿಂದ ದೇಶಪಾಂಡೆ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ಪಕ್ಷಾಂತರ ಸಂದರ್ಭದಲ್ಲಿ ನನ್ನ ಮೇಲೂ ಪ್ರಭಾವ ಬೀರಲು ಅವರು ಪರೋಕ್ಷವಾಗಿ ಪ್ರಯತ್ನಿಸಿದ್ದರು. ಆದರೆ ಅದು ಫಲ ನೀಡಲಿಲ್ಲ ಎಂದು ದೂರಿದರು.

ಈ ಪ್ರದೇಶದ ಅಭಿವೃದ್ಧಿ ದೃಷ್ಟಿಯಿಂದಷ್ಟೇ ಆನಂದ್ ಪಕ್ಷಾಂತರ ಮಾಡಿದ್ದಾರೆಯೇ ಹೊರತು, ಯಾವುದೇ ಅಧಿಕಾರದ ಆಸೆಯಿಂದಲ್ಲ ಎಂದು ಇದೇ ಸಂದರ್ಭದಲ್ಲಿ ಶುಭಲತಾ ಸ್ಪಷ್ಟನೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೆಡಿಎಸ್- ಕಾಂಗ್ರೆಸ್ ಮೈತ್ರಿ ಇಂಗಿತ
ಮಠಗಳು ಹಣ ಸುಲಿಗೆಯ ಕೇಂದ್ರ: ಶಾಂತವೀರಶ್ರೀ
ತನಿಖೆಗೆ ಹೆದರುವುದಿಲ್ಲ: ರೇವಣ್ಣ
ಆಸ್ನೋಟಿಕರ್ ವಿರುದ್ಧ ದೇಶಪಾಂಡೆ ಸ್ಪರ್ಧಿಸಲಿ:ಧನಂಜಯ್
ಮೈತ್ರಿಗೆ ಮುಕ್ತ ಮನಸ್ಸು: ದೇಶಪಾಂಡೆ
ಬಜೆಟ್‌‌ನಲ್ಲಿ ಅನ್ಯಾಯವಾಗಿದ್ದರೆ ನಿವೃತ್ತಿ: ಸಿಎಂ