ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪರಿಷತ್ ಚುನಾವಣೆ: ಬಿಜೆಪಿ-ಕಾಂಗ್ರೆಸ್ ಪಟ್ಟಿ ಪ್ರಕಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪರಿಷತ್ ಚುನಾವಣೆ: ಬಿಜೆಪಿ-ಕಾಂಗ್ರೆಸ್ ಪಟ್ಟಿ ಪ್ರಕಟ
ರಾಜ್ಯ ವಿಧಾನಪರಿಷತ್ 3 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವ ಮೂಲಕ ಚುನಾವಣಾ ಅಖಾಡ ಸಿದ್ದವಾದಂತಾಗಿದೆ.

ಕಾಂಗ್ರೆಸ್‌‌ನಲ್ಲಿ ಮೂರು ಸ್ಥಾನಗಳಿಗೂ ಟಿಕೆಟ್ ಆಕಾಂಕ್ಷಿಗಳು ಪೈಪೋಟಿಗಿಳಿದಿದ್ದು, ಜೊತೆಗೆ ಕಾಂಗ್ರೆಸ್ ಹೈಕಮಾಂಡ್ ಆದೇಶಕ್ಕಾಗಿ ಕಾಯುತ್ತಿರುವ ಕಾರಣದಿಂದಾಗಿ ಅಭ್ಯರ್ಥಿಗಳ ಆಯ್ಕೆಯನ್ನು ಸೋಮವಾರ ಸಂಜೆ ಅಂತಿಮಗೊಳಿಸಲಾಗಿತ್ತು.

ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಕೊಡಗಿನಿಂದ ಎಸ್. ಮೇದಪ್ಪ, ಬೆಳಗಾವಿಯಿಂದ ಮಾಜಿ ಸಚಿವ ಶಶಿಕಾಂತಅಕ್ಕಪ್ಪ ನಾಯಕ, ಧಾರವಾಡದಿಂದ ಮಾಜಿ ಶಾಸಕ ಶಿವರಾಜ್ ಸಜ್ಜನ ಕಣಕ್ಕಿಳಿದಿದ್ದಾರೆ.

ಚುನಾವಣೆಯಲ್ಲಿ ಈ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸೆಣಸಾಡಲಿದ್ದು, ಏತನ್ಮಧ್ಯೆ ಜೆಡಿಎಸ್ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದು, ಪಕ್ಷ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಹೇಳಿದೆ.

ಅ.31ಕ್ಕೆ ನಡೆಯಲಿರುವ ನಡೆಯಲಿರುವ ಚುನಾವಣೆಗೆ ನಾಳೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಬಸವರಾಜ ಬೊಮ್ಮಾಯಿ, ಅರುಣ್ ಮಾಚಯ್ಯ ಹಾಗೂ ಸತೀಶ್ ಜಾರಕಿಹೊಳೆ ಅವರ ರಾಜೀನಾಮೆಯಿಂದಾಗಿ ವಿಧಾನ ಪರಿಷತ್ತಿನ ಮೂರು ಸ್ಥಳಗಳು ತೆರವಾಗಿದ್ದವು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಂಡ್ಯ: ಹಾಡಹಗಲೇ 13ಲಕ್ಷ ದರೋಡೆ
ಕಾಂಗ್ರೆಸ್ ಆರೋಪಕ್ಕೆ ಆಸ್ನೋಟಿಕರ್ ಉತ್ತರ
ಕೋಲಾರ: ಭೀಕರ ರಸ್ತೆ ಅಪಘಾತಕ್ಕೆ 10 ಬಲಿ
ದಿಲೀಪ್ ಹತ್ಯೆಯಲ್ಲಿ ದೇಶಪಾಂಡೆ ಕೈವಾಡ:ಶುಭಲತಾ
ಜೆಡಿಎಸ್- ಕಾಂಗ್ರೆಸ್ ಮೈತ್ರಿ ಇಂಗಿತ
ಮಠಗಳು ಹಣ ಸುಲಿಗೆಯ ಕೇಂದ್ರ: ಶಾಂತವೀರಶ್ರೀ