ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವೈಯಕ್ತಿಕ ಹಿತಕ್ಕಿಂತ ಪಕ್ಷವೇ ಮುಖ್ಯ:ಡಿಕೆಶಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೈಯಕ್ತಿಕ ಹಿತಕ್ಕಿಂತ ಪಕ್ಷವೇ ಮುಖ್ಯ:ಡಿಕೆಶಿ
ವೈಯಕ್ತಿಕ ಹಿತಕ್ಕಿಂತ ಪಕ್ಷದ ಸರ್ವಾಂಗೀಣ ಹಿತವೇ ಮುಖ್ಯ ಎಂದು ರಾಜ್ಯ ಕಾಂಗ್ರೆಸ್ ನೂತನ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪಕ್ಷ ತಮಗೆ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ನನ್ನ ಮೊದಲ ಆದ್ಯತೆ. ಮುಂಬರುವ ಚುನಾವಣೆಯ ದೃಷ್ಟಿಯಿಂದ ಪಕ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡುವುದು ನನ್ನ ಒಂದಂಶದ ಕಾರ್ಯಕ್ರಮ ಎಂದು ತಿಳಿಸಿದರು.

ಜೆಡಿಎಸ್ ಜೊತೆಗೆ ಮತ್ತೆ ಮೈತ್ರಿ ಸಾಧ್ಯತೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,ಮೈತ್ರಿ ಕುರಿತು ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಹೇಳಿದರು.

ಕಾಂಗ್ರೆಸ್ ಅಧ್ಯಕ್ಷರ ಭೇಟಿ: ಕುಮಾರಸ್ವಾಮಿ

ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಚರ್ಚಿಸಲು ಶೀಘ್ರವೇ ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನು ಭೇಟಿ ಮಾಡಲಿರುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ತಿಳಿಸಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ತೀವ್ರ ವಿರೋಧದ ನಡುವೆಯೂ ಮೈತ್ರಿಗಾಗಿ ಇತರ ಕಾಂಗ್ರೆಸ್ ನಾಯಕರು ಮೃದು ಧೋರಣೆ ತಳೆದಿದ್ದು, ಮೈತ್ರಿ ಏರ್ಪಡುವುದೇ ಇಲ್ಲವೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಮತ್ತು ಸಿದ್ಧರಾಮಯ್ಯ ಅವರ ಮುಂದಿನ ನಡೆಯ ಕುರಿತು ಜನರಲ್ಲಿ ಕುತೂಹಲ ಮೂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚುನಾವಣೆ: ಬಿಜೆಪಿ ಪಟ್ಟಿ ಪ್ರಕಟ-ಗೊಂದಲದಲ್ಲಿ ಕಾಂಗ್ರೆಸ್
ಮಂಡ್ಯ: ಹಾಡಹಗಲೇ 13ಲಕ್ಷ ದರೋಡೆ
ಕಾಂಗ್ರೆಸ್ ಆರೋಪಕ್ಕೆ ಆಸ್ನೋಟಿಕರ್ ಉತ್ತರ
ಕೋಲಾರ: ಭೀಕರ ರಸ್ತೆ ಅಪಘಾತಕ್ಕೆ 10 ಬಲಿ
ದಿಲೀಪ್ ಹತ್ಯೆಯಲ್ಲಿ ದೇಶಪಾಂಡೆ ಕೈವಾಡ:ಶುಭಲತಾ
ಜೆಡಿಎಸ್- ಕಾಂಗ್ರೆಸ್ ಮೈತ್ರಿ ಇಂಗಿತ