ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಕೆಂಚಪ್ಪಗೌಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಕೆಂಚಪ್ಪಗೌಡ
ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಬಿ.ಕೆಂಚಪ್ಪಗೌಡ ಅವರು ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದಲ್ಲದೆ ಕೆಂಚಪ್ಪಗೌಡ ತಂಡದ ಎಲ್ಲ ಆರು ಮಂದಿ ನಿರ್ದೇಶಕರೂ ಆಯ್ಕೆಯಾಗಿದ್ದಾರೆ.

ಸೋಮವಾರ ನಡೆದ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಡಾ. ಮಹದೇವು, ಖಜಾಂಚಿಯಾಗಿ ಎನ್. ರಮೇಶ್, ಜಂಟಿ ಕಾರ್ಯದರ್ಶಿಯಾಗಿ ಆಡಿಟರ್ ನಾಗರಾಜ್, ಉಪಾಧ್ಯಕ್ಷರಾಗಿ ಕೆ. ಮಲ್ಲಯ್ಯ ಹಾಗೂ ಎಚ್.ಎಲ್. ಶಿವಣ್ಣ ಚುನಾಯಿತರಾಗಿದ್ದಾರೆ. ಶಾಸಕ ಎಂ. ಶ್ರೀನಿವಾಸ್ ನೇತೃತ್ವದಲ್ಲಿ ಸ್ಪರ್ಧಿಸಿದ್ದ 6 ಮಂದಿ ಪರಾಭವಗೊಂಡಿದ್ದಾರೆ.

ಕೆಂಚಪ್ಪಗೌಡ ತಂಡದ ಐದು ಮಂದಿ ಪದಾಧಿಕಾರಿಗಳಿಗೆ ತಲಾ 24 ಮತಗಳು ಲಭಿಸಿದ್ದು, ಎನ್. ರಮೇಶ್ ಅವರಿಗೆ 23 ಮತಗಳು ದೊರೆತಿದ್ದವು. ಎಂ. ಶ್ರೀನಿವಾಸ್ ಸೇರಿದಂತೆ ಎಲ್ಲ ಐದು ಮಂದಿ ನಿರ್ದೇಶಕರಿಗೂ ತಲಾ 11 ಮತಗಳು ದೊರೆತರೆ, ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಅ.ದೇವೇಗೌಡರಿಗೆ 12 ಮತಗಳು ದೊರೆತವು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆನೇಕಲ್ ಚರ್ಚ್‌ಗೆ ಬೆಂಕಿ:ಸಿಎಂ ಭೇಟಿಗೆ ಪಟ್ಟು !
ವೈಯಕ್ತಿಕ ಹಿತಕ್ಕಿಂತ ಪಕ್ಷವೇ ಮುಖ್ಯ:ಡಿಕೆಶಿ
ಚುನಾವಣೆ: ಬಿಜೆಪಿ ಪಟ್ಟಿ ಪ್ರಕಟ-ಗೊಂದಲದಲ್ಲಿ ಕಾಂಗ್ರೆಸ್
ಮಂಡ್ಯ: ಹಾಡಹಗಲೇ 13ಲಕ್ಷ ದರೋಡೆ
ಕಾಂಗ್ರೆಸ್ ಆರೋಪಕ್ಕೆ ಆಸ್ನೋಟಿಕರ್ ಉತ್ತರ
ಕೋಲಾರ: ಭೀಕರ ರಸ್ತೆ ಅಪಘಾತಕ್ಕೆ 10 ಬಲಿ