ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಉಡುಪಿಯಲ್ಲಿ ಕನಕ ಗೋಪುರವೇ ಇಲ್ಲ:ಈಶ್ವರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಡುಪಿಯಲ್ಲಿ ಕನಕ ಗೋಪುರವೇ ಇಲ್ಲ:ಈಶ್ವರಪ್ಪ
ಉಡುಪಿಯಲ್ಲಿ ಕನಕ ಗೋಪುರವೇ ಇರಲಿಲ್ಲ ಎಂಬ ಇಂಧನ ಸಚಿವ ಈಶ್ವರಪ್ಪ ಅವರ ಹೇಳಿಕೆ ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕುರುಬ ಸಮಾಜದ ಮುಖಂಡರು ಬಹಿರಂಗ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.

ಕನಕಕಿಂಡಿಯ ಮೇಲೆ ಕಟ್ಟಿದ್ದ ಗೋಪುರ ಕನಕ ಗೋಪುರ ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿರುವ ಇತಿಹಾಸ. ಆದರೆ ಯಾರನ್ನೋ ಒಲೈಸಲು ಸಮಾಜದ ಮುಖಂಡರನ್ನು ನಿಂದಿಸಿರುವುದರ ಜೊತೆಗೆ ಕನಕನಿಗೆ ಅವಹೇಳನವಾಗುವಂತಹ ಮಾತುಗಳನ್ನಾಡಿರುವುದು ಕುರುಬ ಸಮಾಜದವರನ್ನು ಕೆರಳಿಸಿದೆ.

ಈ ನಡುವೆ ಈಶ್ವರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಕುರುಬ ಸಮುದಾಯದ ಮುಖಂಡ ಎಚ್. ಎಂ. ರೇವಣ್ಣ, ಈಶ್ವರಪ್ಪನವರು ಇನ್ನೂ ಆರ್ ಎಸ್ ಎಸ್ ಗುಂಗಿನಲ್ಲೇ ಇದ್ದಾರೆ. ಇತಿಹಾಸ ತಿಳಿದುಕೊಳ್ಳದೆ ಮಾತನಾಡುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಪಕ್ಷೇತರ ಶಾಸಕ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ವರ್ತೂರ್ ಪ್ರಕಾಶ್ ಕೂಡ ಸಚಿವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಈಶ್ವರಪ್ಪ ಹೇಳಿಕೆ ಅಪ್ಪಟ ಸುಳ್ಳು. ಅವರನ್ನೂ ಎಂದೂ ನಾವು ಸಮಾಜದ ನಾಯಕರು ಎಂದು ಒಪ್ಪೇ ಇಲ್ಲ. ಹೇಳಿಕೆ ನೀಡುವ ಮೂಲಕ ಸಮುದಾಯಕ್ಕೆ ನೋವನ್ನುಂಟು ಮಾಡಿದ್ದಾರೆ ಎಂದು ದೂರಿದ್ದಾರೆ.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೂರು ಕ್ಷೇತ್ರಗಳಲ್ಲಿಯೂ ಬಿಜೆಪಿಗೆ ಜಯ: ಯಡಿಯೂರಪ್ಪ
ಆಸ್ನೋಟಿಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ
ಬಾಬಾ ಬುಡನ್‌ಗಿರಿ: ದತ್ತಮಾಲೆಗೆ ಚಾಲನೆ
ಅಲ್ಪಸಂಖ್ಯಾತರ ಓಲೈಕೆಗಾಗಿ ಭಾವೈಕ್ಯ ಸಭೆ:ಸಿಎಂ
ಉಗ್ರ ಮನ್ಸೂರ್‌ಗೆ ಭಟ್ಕಳದಲ್ಲಿ ತರಬೇತಿ !
ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಕೆಂಚಪ್ಪಗೌಡ