ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಉಪಚುನಾವಣೆಗೆ ಆಸ್ನೋಟಿಕರ್‌‌ ಅಭ್ಯರ್ಥಿ:ಧನಂಜಯ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಪಚುನಾವಣೆಗೆ ಆಸ್ನೋಟಿಕರ್‌‌ ಅಭ್ಯರ್ಥಿ:ಧನಂಜಯ್
ಸಚಿವ ಆನಂದ್ ಆಸ್ನೋಟಿಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದರೂ ಕೂಡ,ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ತೊಂದರೆ ಇಲ್ಲ ಎಂದು ಮಾಜಿ ಸಚಿವ ಧನಂಜಯ್ ಕುಮಾರ್ ತಿಳಿಸಿದ್ದಾರೆ.

ಅಸ್ನೋಟಿಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುವ ಬಗ್ಗೆ ಹೈಕೋರ್ಟ್‌‌ನಲ್ಲಿ ಅರ್ಜಿ ಸಲ್ಲಿಸಿ ತಡೆಯಾಜ್ಞೆ ಪಡೆಯಲು ಬಿಜೆಪಿ ಚಿಂತನೆ ನಡೆಸಿರುವುದಾಗಿ ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಪರಿಶೀಲನೆ ಅಥವಾ ವಿಚಾರಣೆ ನಡೆಸುವುದು ಚುನಾವಣಾ ಆಯೋಗದ ಕೆಲಸವಲ್ಲ. ಕ್ರಿಮಿನಲ್ ಮೊಕದ್ದಮೆ ಹೂಡಿರುವ ಕುರಿತು ಹೈಕೋರ್ಟ್‌‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಮೊಕದ್ದಮೆ ಸಲ್ಲಿಸಿದ ತಕ್ಷಣವೇ ಚುನಾವಣೆ ಸ್ಪರ್ಧೆಯ ಕುರಿತು ಪ್ರಶ್ನೆ ಏಳುವುದಿಲ್ಲ. ಚುನಾವಣಾ ಆಯೋಗ ಚುನಾವಣೆಗೆ ಸ್ಪರ್ಧಿಸದಂತೆ ಕ್ರಮ ಕೈಗೊಳ್ಳಬಹುದು. ಆದರೆ ಈ ಪ್ರಕ್ರಿಯೆಗೆ ಬಹಳ ಅಂತರ ಇರುವುದರಿಂದ ಮುಂಬರುವ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದ ಬಿಜೆಪಿಗೆ ಯಾವುದೇ ಭೀತಿಯಲ್ಲ. ಬದಲಾಗಿ ಈ ಮೈತ್ರಿ ಬಿಜೆಪಿ ಜಯಕ್ಕೆ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶಂಕಿತ ಉಗ್ರರ ವಿಚಾರಣೆ ನ.18ಕ್ಕೆ ಮುಂದೂಡಿಕೆ
ಉಡುಪಿಯಲ್ಲಿ ಕನಕ ಗೋಪುರವೇ ಇಲ್ಲ:ಈಶ್ವರಪ್ಪ
ಮೂರು ಕ್ಷೇತ್ರಗಳಲ್ಲಿಯೂ ಬಿಜೆಪಿಗೆ ಜಯ: ಯಡಿಯೂರಪ್ಪ
ಆಸ್ನೋಟಿಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ
ಬಾಬಾ ಬುಡನ್‌ಗಿರಿ: ದತ್ತಮಾಲೆಗೆ ಚಾಲನೆ
ಅಲ್ಪಸಂಖ್ಯಾತರ ಓಲೈಕೆಗಾಗಿ ಭಾವೈಕ್ಯ ಸಭೆ:ಸಿಎಂ