ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವಿಧಾನಪರಿಷತ್ ಚುನಾವಣೆ:ನಾಮಪತ್ರ ಸಲ್ಲಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಧಾನಪರಿಷತ್ ಚುನಾವಣೆ:ನಾಮಪತ್ರ ಸಲ್ಲಿಕೆ
ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ ರಂಗೇರಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌‌ನ ಮೂರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಶಶಿಕಾಂತ್ ಅಕ್ಕಪ್ಪ ನಾಯಕ ಸ್ಪರ್ಧಾಕಣದಲ್ಲಿದ್ದರೆ, ಕಾಂಗ್ರೆಸ್‌‌‌ನಿಂದ ಎಸ್.ಸಿ. ಮಾಳಗಿ ಕಣಕ್ಕಿಳಿದಿದ್ದಾರೆ. ಅಂತೆಯೇ, ಧಾರವಾಡದಿಂದ ಮಾಜಿ ಶಾಸಕ ಶಿವರಾಜ ಸಜ್ಜನ ಹಾಗೂ ಕಾಂಗ್ರೆಸ್‌‌‌ನಿಂದ ಶ್ರೀನಿವಾಸ ಮಾನೆ ಸ್ಪರ್ಧಿಸುತ್ತಿದ್ದಾರೆ. ಕೊಡಗಿನಿಂದ ಎಸ್.ಜಿ.ಮೇದಪ್ಪ ಕಣಕ್ಕಿಳಿದಿದ್ದರೆ, ಮೆಟ್ಟು ಚಂಗಪ್ಪ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಗೆ ಅಪಾರ ಬೆಂಬಲಿಗರೊಂದಿಗೆ ಆಗಮಿಸಿದ ಮೂವರು ಅಭರ್ಥಿಗಳು ನಾಮಪತ್ರ ಸಲ್ಲಿಸಿ ಚುನಾವಣೆ ರಣಕಹಳೆ ಮೊಳಗಿಸಿದರು.

ಈ ನಡುವೆ ಜೆಡಿಎಸ್ ಚುನಾವಣೆಗೆ ಸ್ಪರ್ಧಿಸದೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಲು ನಿರ್ಧರಿಸಿದೆ. ಚುನಾವಣೆ ಇದೇ 31ರಂದು ನಡೆಯಲಿದ್ದು, ಮತಗಳ ಎಣಿಕೆ ನವೆಂಬರ್ 3ರಂದು ನಡೆಯಲಿದೆ.

ಮೂರು ಸ್ಥಾನಗಳಿಗೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ಸಂಸದರು, ಶಾಸಕರು, ಮಹಾನಗರ ಪಾಲಿಕೆ ಸದಸ್ಯರು, ಪುರಸಭೆ, ನಗರ ಪಾಲಿಕೆ ಸದಸ್ಯರು, ಪುರಸಭೆ, ಪಟ್ಟಣ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿ ಸದಸ್ಯರು ಮತದಾನದ ಹಕ್ಕನು ಹೊಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚರ್ಚ್ ದಾಳಿ ಹಿಂದೆ ಕೋಮುವಾದಿಗಳು:ಡಿಕೆಶಿ
ಚರ್ಚ್ ದಾಳಿ: ಪಾಟೀಲ್-ಠಾಕೂರ್ ಚರ್ಚೆ
ಉಪಚುನಾವಣೆಗೆ ಆಸ್ನೋಟಿಕರ್‌‌ ಅಭ್ಯರ್ಥಿ:ಧನಂಜಯ್
ಶಂಕಿತ ಉಗ್ರರ ವಿಚಾರಣೆ ನ.18ಕ್ಕೆ ಮುಂದೂಡಿಕೆ
ಉಡುಪಿಯಲ್ಲಿ ಕನಕ ಗೋಪುರವೇ ಇಲ್ಲ:ಈಶ್ವರಪ್ಪ
ಮೂರು ಕ್ಷೇತ್ರಗಳಲ್ಲಿಯೂ ಬಿಜೆಪಿಗೆ ಜಯ: ಯಡಿಯೂರಪ್ಪ