ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕೆಪಿಎಸ್‌ಸಿ ಅವ್ಯವಹಾರ: ಸಿಬಿಐ ತನಿಖೆಗೆ ಅರ್ಜಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೆಪಿಎಸ್‌ಸಿ ಅವ್ಯವಹಾರ: ಸಿಬಿಐ ತನಿಖೆಗೆ ಅರ್ಜಿ
ಗೆಜೆಟೆಡ್ ಪ್ರೊಬೆಷನರಿ ಹುದ್ದೆಯ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗವು 1998, 1999 ಹಾಗೂ 2004ರಲ್ಲಿ ನಡೆದಿರುವ ಆಯ್ಕೆ ಪ್ರಕ್ರಿಯೆಯನ್ನು ತನಿಖೆ ಮಾಡಲು ಸಿಬಿಐಗೆ ವಹಿಸಿಕೊಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

1998ರಲ್ಲಿನ ಪರೀಕ್ಷೆ ವಿವಾದವು ಹೈಕೋರ್ಟ್‌ನಲ್ಲಿ ಅಂತಿಮ ತೀರ್ಪಿಗಾಗಿ ಕಾದು ಕುಳಿತಿರುವ ಬೆನ್ನ ಹಿಂದೆಯೇ, ರಾಜ್ಯದ ವಿವಿಧ ಭಾಗಗಳ 60ಕ್ಕೂ ಅಧಿಕ ಅಭ್ಯರ್ಥಿಗಳು ಹೊಸ ಅರ್ಜಿಯನ್ನು ಸಲ್ಲಿಸಿದ್ದಾರೆ.

ನೇಮಕಾತಿಯಲ್ಲಿ ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತ ನಡೆದಿದೆ ಎಂಬುದು ಖಲೀಲ್ ಅಹಮದ್ ಹಾಗೂ ಇತರ ಅರ್ಜಿದಾರರ ದೂರು. 1998ರಲ್ಲಿ ಮೊದಲು 415 ಹುದ್ದೆಗಳಿಗೆ ಅರ್ಜಿ ಕರೆದು ನಂತರ ಅದನ್ನು 383ಕ್ಕೆ ಇಳಿಸಲಾಯಿತು.

ಅಂತೆಯೇ 1999ರಲ್ಲಿ 190 ಹುದ್ದೆಯನ್ನು 191ಕ್ಕೆ ಏರಿಸಲಾದರೆ, 2004ರಲ್ಲಿ 169ಹುದ್ದೆಯನ್ನು 152ಕ್ಕೆ ಇಳಿಸುವುದರೊಂದಿಗೆ ಗೊಂದಲಮಯ ವಾತಾವರಣ ನಿರ್ಮಾಣ ಮಾಡಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಈಗಾಗಲೇ ನೇಮಕಾತಿಗೊಂಡಿರುವ ಅಭ್ಯರ್ಥಿಗಳಿಗೆ ಯಾವುದೇ ಮಹತ್ವದ ಹುದ್ದೆ ನೀಡದಂತೆ ಸರ್ಕಾರಕ್ಕೆ ಆದೇಶಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ. ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ವಿಚಾರಣೆಯನ್ನು ಮುಂದೂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದತ್ತಮಾಲೆ ಅಭಿಯಾನಕ್ಕೆ ತೆರೆ
ಸಿದ್ದಗಂಗಾಶ್ರೀಗೆ ಅವಹೇಳನ:ಕುಮಾರಸ್ವಾಮಿಗೆ ಸಮನ್ಸ್ ಜಾರಿ
ಉಪಚುನಾವಣೆ:ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ
ವಿಧಾನಪರಿಷತ್ ಚುನಾವಣೆ:ನಾಮಪತ್ರ ಸಲ್ಲಿಕೆ
ಚರ್ಚ್ ದಾಳಿ ಹಿಂದೆ ಕೋಮುವಾದಿಗಳು:ಡಿಕೆಶಿ
ಚರ್ಚ್ ದಾಳಿ: ಪಾಟೀಲ್-ಠಾಕೂರ್ ಚರ್ಚೆ