ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 1ನೆ ತರಗತಿಗೆ ಹೊಸ ಇಂಗ್ಲಿಷ್ ಪಠ್ಯ: ಕಾಗೇರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
1ನೆ ತರಗತಿಗೆ ಹೊಸ ಇಂಗ್ಲಿಷ್ ಪಠ್ಯ: ಕಾಗೇರಿ
ಮುಂದಿನ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಯ ಇಂಗ್ಲಿಷ್ ಪಠ್ಯ ಪುಸ್ತಕ ಪರಿಷ್ಕರಿಸಲು ಸರ್ಕಾರ ನಿರ್ಧರಿಸಿರುವುದಾಗಿ ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಪ್ರಸ್ತುತ ಇರುವ ಪಠ್ಯಪುಸ್ತಕದ ಗುಣಮಟ್ಟ ಸರಿಯಿಲ್ಲ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ಬುದ್ಧಿಮತ್ತೆಗೆ ಪೂರಕವಾಗಿ ಪಠ್ಯ ಪುಸ್ತಕ ರೂಪಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಈ ಕುರಿತು ಡಿಎಸ್ ಆರ್ ಟಿ ಹಾಗೂ ಇಲಾಖೆ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ. ತಜ್ಞರ ಸಮಿತಿ ನೂತನ ಪಠ್ಯಕ್ರಮ ರೂಪಿಸಲಿದೆ ಎಂದು ಅವರು ವಿವರಣೆ ನೀಡಿದರು.

ಇದೇ ವೇಳೆ ಒಂದೆ ಆವರಣದಲ್ಲಿ ಇಲ್ಲದ ಸಂಯುಕ್ತ ಪ್ರೌಢಶಾಲೆಗಳನ್ನು ರದ್ದು ಮಾಡುವ ಕುರಿತು ರಾಜ್ಯ ಸರ್ಕಾರ ಪರಿಶೀಲಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಶಾಲೆಗಳಿಗೆ ರಜೆ ನೀಡಿ ಪ್ರತಿಭಟನೆ ನಡೆಸಿದ ಅಲ್ಪಸಂಖ್ಯಾತರ ಶಾಲಾ ಆಡಳಿತ ಮಂಡಳಿಗೆ ಶಿಕ್ಷಣ ಇಲಾಖೆ ನೋಟಿಸ್ ನೀಡಿದ್ದೇ ರಾಜ್ಯದಲ್ಲಿ ಚರ್ಚ್ ಮೇಲಿನ ದಾಳಿ ಮತ್ತಿತರ ಅಹಿತಕರ ಘಟನೆಗಳಿಗೆ ಕಾರಣ ಎಂಬ ವಿಪಕ್ಷಗಳ ಆರೋಪ ದುರುದ್ದೇಶದಿಂದ ಕೂಡಿದ್ದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೆಪಿಎಸ್‌ಸಿ ಅವ್ಯವಹಾರ:ಸಿಬಿಐ ತನಿಖೆಗೆ ಅರ್ಜಿ
ದತ್ತಮಾಲೆ ಅಭಿಯಾನಕ್ಕೆ ತೆರೆ
ಸಿದ್ದಗಂಗಾಶ್ರೀಗೆ ಅವಹೇಳನ:ಕುಮಾರಸ್ವಾಮಿಗೆ ಸಮನ್ಸ್ ಜಾರಿ
ಉಪಚುನಾವಣೆ:ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ
ವಿಧಾನಪರಿಷತ್ ಚುನಾವಣೆ:ನಾಮಪತ್ರ ಸಲ್ಲಿಕೆ
ಚರ್ಚ್ ದಾಳಿ ಹಿಂದೆ ಕೋಮುವಾದಿಗಳು:ಡಿಕೆಶಿ