ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನಾನು ಸಮಾಜವಾದಿ: ಅನಂತಮೂರ್ತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾನು ಸಮಾಜವಾದಿ: ಅನಂತಮೂರ್ತಿ
ನಾನು ಗೊಡ್ಡು ಸಂಪ್ರದಾಯವಾದಿಯಲ್ಲ, ನಾನೊಬ್ಬ ಸಮಾಜವಾದಿ ಎಂದು ಖ್ಯಾತ ಸಾಹಿತಿ ಯು.ಆರ್.ಅನಂತಮೂರ್ತಿ ಅವರು ಉಡುಪಿಯಲ್ಲಿ ಕನಕ ಅಧ್ಯಯನ ಪೀಠದ ಉದ್ಘಾಟನಾ ಸಮಾರಂಭದಲ್ಲಿ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಅನಂತಮೂರ್ತಿಯವರು, ರಸ್ತೆ ಅಗಲೀಕರಣ ಕಾರು ಇದ್ದವರಿಗೆ ಮಾತ್ರ ಆಗಬಾರದು.ಅಂತಹ ಕಡೆ ಸೈಕಲ್ ಸವಾರರಿಗೂ ಮಾರ್ಗ ನಿರ್ಮಾಣವಾಗಬೇಕು. ರಸ್ತೆ ಮಧ್ಯೆ ವಿವಿಧ ಕಂಪೆನಿಗಳ ಜಾಹೀರಾತು ಫಲಕಗಳು,ನಾಯಕರ ಜನ್ಮದಿನ ಆಚರಣೆಗೆ ಶುಭಾಶಯ ಕೋರುವ ಫಲಕ ರಾರಾಜಿಸಬಾರದು ಎಂದು ಹೇಳಿಕೆ ನೀಡಿದ್ದರು.

ಅದಕ್ಕೆ ಇಂಧನ ಸಚಿವ ಈಶ್ವರಪ್ಪ ಅವರು,ಇದನ್ನು ಗೊಡ್ಡುವಾದ ಎಂದು ಎಂದು ಹೇಳಿದ್ದರು.

ಕೆ.ಎಸ್.ಈಶ್ವರಪ್ಪ ಹಿರಿಯರು, ಸಚಿವ ಸಂಪುಟದಲ್ಲಿ ಇರುವ ಹಿರಿಯ ರಾಜಕಾರಣಿಯಾಗಿದ್ದು,ಹೀಗೆ ಮಾತನಾಡಿದ್ದು ಬೇಸರ ತರಿಸುತ್ತದೆ ಎಂದು ಅನಂತಮೂರ್ತಿ ದಾವಣಗೆರೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದರು.

ಹೀಗೆ ವಾಸ್ತವಿಕ ಅಂಶಗಳ ಬಗ್ಗೆ ಹೇಳಿದ್ದಕ್ಕೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದನ್ನು ಕೇಳಿದರೆ, ಏನು ಹೇಳಬೇಕು ಎಂಬುದು ಗೊತ್ತಾಗದಷ್ಟು ನಾನು ದಡ್ಡನಾಗುತ್ತಿದ್ದೇನಾ ಎಂಬ ಭಾವನೆ ನನ್ನನ್ನು ಕಾಡುತ್ತಿದೆ ಎಂದರು.

ಹಿಂದೆ ಇದ್ದ ಮುಖ್ಯಮಂತ್ರಿಯೊಬ್ಬರು (ಕುಮಾರಸ್ವಾಮಿ) ತಮ್ಮನ್ನು ಯಾರು ಎಂದು ಕೇಳಿದ್ದರು. ಅವರು ವಯಸ್ಸಿನಲ್ಲಿ ಕಿರಿಯವರಾಗಿದ್ದರಿಂದ ತಾವು ಕ್ಷಮಿಸಿದ್ದು, ಹಿರಿಯರಾದ ಈಶ್ವರಪ್ಪ ಸಹ ಅದೇ ರೀತಿ ಮಾತನಾಡಿದ್ದು ಮಾತ್ರ ನಿಜಕ್ಕೂ ಬೇಸರದ ಸಂಗತಿ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
1ನೆ ತರಗತಿಗೆ ಹೊಸ ಇಂಗ್ಲಿಷ್ ಪಠ್ಯ: ಕಾಗೇರಿ
ಕೆಪಿಎಸ್‌ಸಿ ಅವ್ಯವಹಾರ: ಸಿಬಿಐ ತನಿಖೆಗೆ ಅರ್ಜಿ
ದತ್ತಮಾಲೆ ಅಭಿಯಾನಕ್ಕೆ ತೆರೆ
ಸಿದ್ದಗಂಗಾಶ್ರೀಗೆ ಅವಹೇಳನ:ಕುಮಾರಸ್ವಾಮಿಗೆ ಸಮನ್ಸ್ ಜಾರಿ
ಉಪಚುನಾವಣೆ:ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ
ವಿಧಾನಪರಿಷತ್ ಚುನಾವಣೆ:ನಾಮಪತ್ರ ಸಲ್ಲಿಕೆ