ದಸರಾ ಮಹೋತ್ಸವದ ಉದ್ಘಾಟನೆಗೆ ಆಗಮಿಸಿದರೆ ಸುಟ್ಟು ಭಸ್ಮ ಆಗುತ್ತೀರಿ ಎಂದು ತುಮಕೂರಿನ ಸಿದ್ದಗಂಗಾ ಮಠದ ಶತಾಯುಷಿ ಡಾ| ಶಿವಕುಮಾರ ಸ್ವಾಮೀಜಿಗಳಿಗೆ ಬೆದರಿಕೆ ಪತ್ರವೊಂದು ಬಂದಿರುವ ಸಂಗತಿ ತಡವಾಗಿ ತಿಳಿದು ಬಂದಿದೆ.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುತ್ತೂರು ಶ್ರೀಗಳು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ದಸರಾ ಉದ್ಘಾಟನೆಗೆ ಬರುವ ಮುನ್ನಾದಿನ ಸಿದ್ದಗಂಗಾಶ್ರೀಗಳಿಗೆ ಈ ಪತ್ರ ಬಂದಿತ್ತು.ಆದರೆ ಶ್ರೀಗಳು ಮೈಸೂರಿಗೆ ಬಂದು ನಾಡಹಬ್ಬಕ್ಕೆ ಚಾಲನೆ ಕೊಟ್ಟು ಹಿಂತಿರುಗಿದ ಬಳಿಕ ಈ ಪತ್ರ ಅವರ ಕೈ ಸೇರಿದೆ ಎಂದು ತಿಳಿಸಿದ್ದಾರೆ.
ತಾವು ಹಿರಿಯರು, ತಮ್ಮ ಬಗ್ಗೆ ನಮಗೆ ಅಪಾರ ಗೌರವ ಭಾವನೆ ಇದೆ. ಆದ್ದರಿಂದಲೇ ಈ ಪತ್ರ ಬರೆದಿದ್ದೇವೆ. ದಸರಾ ಉದ್ಘಾಟನೆಗೆ ನೀವು ಹೋಗಬಾರದು. ಒಂದು ವೇಳೆ ನಮ್ಮ ಮಾತು ಮೀರಿ ಹೋದರೆ ನೀವು ಸುಟ್ಟು ಭಸ್ಮವಾಗುತ್ತೀರಿ ಎಂಬ ಅಂಶ ಪತ್ರದಲ್ಲಿತ್ತು ಎಂದು ಶ್ರೀಗಳು ಹೇಳಿದ್ದಾರೆ. |