ಮುಂದಿನ ಆರು ತಿಂಗಳೊಳಗೆ ಬಿಬಿಎಂಪಿ ಚುನಾವಣೆ ನಡೆಸಬೇಕೆಂಬ ನ್ಯಾಯಾಲಯದ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸುವ ಲಕ್ಷಣಗಳು ಕಂಡು ಬರುತ್ತಿಲ್ಲ. ಇದೀಗ ಚುನಾವಣೆಯನ್ನು ಮತ್ತೆ ಆರು ತಿಂಗಳು ಮುಂದೂಡುವ ಕುರಿತು ಚಿಂತನೆ ನಡೆಸುತ್ತಿದೆ.
ನ್ಯಾಯಾಲಯ ನೀಡಿರುವ ತೀರ್ಪಿನ ಪ್ರಕಾರ ಅಕ್ಟೋಬರ್ ತಿಂಗಳೊಳಗಾಗಿ ಬಿಬಿಎಂಪಿ ಚುನಾವಣೆ ನಡೆಸಬೇಕಿತ್ತು. ಆದರೆ ಈ ಕುರಿತು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ಸರ್ಕಾರ 144 ದಿನಗಳ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದೆ ಎಂದು ತಿಳಿದು ಬಂದಿದೆ.
ನೂರು ವಾರ್ಡ್‌ಗಳಿಂದ 147 ವಾರ್ಡ್‌ಗಳಿಗೆ ಏರಿಕೆ, 840 ಚ.ಕಿ.ಮೀ. ವ್ಯಾಪ್ತಿ ವಿಸ್ತರಣೆಯ ಹೊಸ ನಕ್ಷೆ ರೂಪಿಸುವುದ ಸೇರಿದಂತೆ ಹಲವು ಕಾರ್ಯ ನಡೆಸಲು ಕನಿಷ್ಠ ಎರಡುವರೆ ತಿಂಗಳು ಕಾಲಾವಕಾಶ ನೀಡಬೇಕು. ಬಳಿಕ ಮೂರು ತಿಂಗಳೊಳಗೆ ಚುನಾವಣೆ ನಡೆಸುವುದಾಗಿ ಹೈಕೋರ್ಟ್ ಗೆ ಸರ್ಕಾರ ಮಧ್ಯಂತರ ಅರ್ಜಿಯಲ್ಲಿ ತಿಳಿಸಿದೆ. |