ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರಾಜ್ಯೋತ್ಸವ ಪ್ರಶಸ್ತಿ ನೀಡಿ:ಹೊಟೇಲ್ ಉದ್ಯಮಿದಾರರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯೋತ್ಸವ ಪ್ರಶಸ್ತಿ ನೀಡಿ:ಹೊಟೇಲ್ ಉದ್ಯಮಿದಾರರು
ನಮಗೂ ರಾಜ್ಯೋತ್ಸವ ಪ್ರಶಸ್ತಿ ನೀಡಿ ! ಹೌದು ಇದು ಹೊಟೇಲ್ ಉದ್ಯಮಿಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಾಡಿದ ಮನವಿ. ಈವರೆಗೂ ಯಾವುದೇ ಹೊಟೇಲ್ ಉದ್ಯಮಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದ ಉದಾಹರಣೆ ಇಲ್ಲ. ಈ ನಿಟ್ಟಿನಲ್ಲಿ ಈ ಬಾರಿಯಾದರೂ ನಮ್ಮನ್ನು ಗುರುತಿಸಿ ಎಂದು ಮನವಿ ಸಲ್ಲಿಸಿದ್ದಾರೆ.

ಮನುಷ್ಯ ಆರೋಗ್ಯವಂತನಾಗಿರಬೇಕಾದರೆ ಆತನಿಗೆ ಉತ್ತಮ ಆಹಾರ ಬೇಕು. ಅಂತಹ ಗುಣಮಟ್ಟದ ಆರೋಗ್ಯಕರ ತಿಂಡಿ ತಿನಿಸುಗಳನ್ನು ಪೂರೈಸುವಲ್ಲಿ ಹೋಟೆಲ್ ಉದ್ಯಮ ಯಶಸ್ವಿಯಾಗಿದೆ.

ಆದರೆ ದುರದೃಷ್ಟವಶಾತ್ ಈವರೆಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಹೋಟೆಲ್ ಉದ್ಯಮಿಗಳಿಗೆ ಸ್ಥಾನ ಲಭಿಸಿಲ್ಲ ಎಂದು ಸಂಘದ ಗೌರವ ಕಾರ್ಯದರ್ಶಿ ಪಿ.ಸಿ. ರಾವ್ ಮುಖ್ಯಮಂತ್ರಿಗಳಿಗೆ ಬರೆದ ಸುದೀರ್ಘ ಪತ್ರದಲ್ಲಿ ಕೇಳಿಕೊಂಡಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಂಘ ಪ್ರಶಸ್ತಿಗಾಗಿ ಕೆಲ ಗಣ್ಯ ಉದ್ಯಮಿಗಳ ಹೆಸರುಗಳನ್ನೂ ಸೂಚಿಸಿರುವುದು ವಿಶೇಷ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ
ಸಿದ್ದಗಂಗಾಶ್ರೀಗೆ ಭಾರತ ರತ್ನ:ಸಚಿವ ಸಂಪುಟ ಶಿಫಾರಸು
ಪ್ರತಿಷ್ಠೆ ಬದಿಗೊತ್ತಿ ಮೈತ್ರಿ: ಕುಮಾರಸ್ವಾಮಿ
ಕನ್ನಡ ನಾಮಫಲಕ ಹಾಕದಿದ್ದರೆ ದಂಡ:ಚಂದ್ರು
ಭಾಗ್ಯಲಕ್ಷ್ಮಿ ಯೋಜನೆ ತನಿಖೆಗೆ ಕೇಂದ್ರಕ್ಕೆ ಪತ್ರ: ಸಿಎಂ
ಅ.28ರವರೆಗೆ ದಿವಾಕರ ಬಾಬು ನ್ಯಾಯಾಂಗ ಬಂಧನಕ್ಕೆ