ಆನೇಕಲ್ ತಾಲೂಕಿನ ಎಡವನಹಳ್ಳಿ ಗ್ರಾಮದ ಚರ್ಚ್‌ವೊಂದರ ಮೇಲೆ ಇತ್ತೀಚೆಗೆ ನಡೆದಿರುವ ದಾಳಿಯ ದುಷ್ಕರ್ಮಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದವರಿಗೆ 10 ಲಕ್ಷ ರೂ.ಬಹುಮಾನ ನೀಡುವುದಾಗಿ ಹೆಚ್.ಟಿ.ಸಾಂಗ್ಲಿಯಾನ ಗುರುವಾರ ಘೋಷಿಸಿದ್ದಾರೆ.
ಚರ್ಚ್‌ನಲ್ಲಿ ನಡೆದಿರುವ ಘಟನೆ ಶಾರ್ಟ್ ಸರ್ಕ್ಯೂಟ್‌ನಿಂದ ನಡೆದಿಲ್ಲ, ಇದು ಕೋಮುಶಕ್ತಿಗಳ ಕೈವಾಡ ಎಂದು ಹೇಳಿದ ಅವರು ಸ್ಥಳೀಯ ಪೊಲೀಸ್ ಅಧಿಕಾರಿಯನ್ನು ವಜಾಗೊಳಿಸುವಂತೆ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ರಾಜ್ಯ ಸರ್ಕಾರ ನೇಮಿಸಿರುವ ಪೊಲೀಸರು ಅಪರಾಧಗಳನ್ನು ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದ್ದು,ಇದರಿಂದಾಗಿ ಜನತೆಗೆ ರಕ್ಷಣೆ ಇಲ್ಲವೆಂದು ಆರೋಪಿಸಿದರು.
ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲದಂತಾಗಿದೆ, ಅಲ್ಲದೇ ಚರ್ಚ್‌ಗೆ ಬೆಂಕಿ ಹಚ್ಚಿದ ಪ್ರಕರಣವನ್ನು ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಮುಚ್ಚಿಹಾಕುವ ಪ್ರಯತ್ನವನ್ನು ಮಾಡುತ್ತಿರುವುದಾಗಿ ಸಾಂಗ್ಲಿಯಾನ ದೂರಿದರು.
|