ಕನ್ನಡ ನಾಡಿನ ಜೀವನದಿ ಕೊಡಗಿನ ತಲಕಾವೇರಿಯಲ್ಲಿ ಶುಕ್ರವಾರ ಮಧ್ನಾಹ್ನ 2.40ಕ್ಕೆ ಸರಿಯಾಗಿ ಕಾವೇರಿ ತೀರ್ಥ ಸ್ವರೂಪಿಣಿಯಾಗಿ ಕಾಣಿಸಿಕೊಳ್ಳುವ ಮೂಲಕ ಸಾವಿರಾರು ಭಕ್ತರು ತೀರ್ಥಸ್ನಾನ ಮಾಡಿ ಪಾವನರಾದರು.ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ಕಾವೇರಿ ತೀರ್ಥೋದ್ಭವಕ್ಕಾಗಿ ಕಾದು ಕುಳಿತಿದ್ದು, ಇಂದು ಮಧ್ನಾಹ್ನ 2.40ಕ್ಕೆ(ಈ ಬಾರಿ 2.48ಕ್ಕೆ ತೀರ್ಥೋದ್ಭವಾಗಲಿದೆ ಎಂದು ಹೇಳಲಾಗಿತ್ತು.ಆದರೂ ಕೆಲವು ನಿಮಿಷ ಮುನ್ನವೇ ತೀರ್ಥೋದ್ಭವಾಗಿದೆ.) ತಲಕಾವೇರಿ ಕುಂಡಿಕೆಯಲ್ಲಿ ತೀರ್ಥ ಉದ್ಭವವಾಗುವ ಮೂಲಕ ಸಾವಿರಾರು ಭಕ್ತರು ಏಕಕಾಲದಲ್ಲಿ ನೀರಿಗೆ ಧುಮುಕುವ ಮೂಲಕ ಪವಿತ್ರ ತೀರ್ಥಕ್ಕಾಗಿ ಭಕ್ತರು ನೂಕುನುಗ್ಗಲಿನಲ್ಲಿ ಸೆಣಸಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಕಾವೇರಿಯಲ್ಲಿನ ಈ ತೀರ್ಥೋದ್ಭವದ ಜಾತ್ರೆಗಾಗಿ ನೆರೆಯ ತಮಿಳುನಾಡು, ಕೇರಳ, ಆಂಧ್ರ ಸೇರಿದಂತೆ ವಿವಿಧೆಡೆಯಿಂದ ಸುಮಾರು 40ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು.ಮುನ್ನೆಚ್ಚರಿಕೆಯ ಅಂಗವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕಾವೇರಿ ಜಾತ್ರೆಯಲ್ಲಿ ಭಕ್ತ ಸಮೂಹ ವಿವಿಧ ಪೂಜೆಗಳನ್ನು ಸಲ್ಲಿಸಿ, ಪವಿತ್ರ ಕಾವೇರಿ ತೀರ್ಥವನ್ನು ಪಡೆಯುವ ಮೂಲಕ ಕೃತಾರ್ಥತೆ ಹೊಂದಿದರು.ಸೂರ್ಯ ತುಲಾರಾಶಿಗೆ ಪ್ರವೇಶಿಸುವ ಶುಭ ಗಳಿಗೆಯಲ್ಲಿ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಧೋದ್ಭವವಾಗಲಿದೆ. ತುಲಾ ಮಾಸದಲ್ಲಿ ಉತ್ತರ ಭಾರತದ ಗಂಗೆ ದಕ್ಷಿಣದ ಕಾವೇರಿಯಲ್ಲಿ ಐಕ್ಯವಾಗುತ್ತಾಳೆ ಎಂಬುದು ನಂಬಿಕೆ. |
|