ತೀವ್ರ ವಿವಾದ ಹುಟ್ಟಿಸಿದ್ದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ್ ಅಸ್ನೋಟಿಕರ್ ಅವರ ಆಸ್ತಿ ಪ್ರಮಾಣಪತ್ರ ಪ್ರಕರಣದ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ.
ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಆಸ್ತಿಯನ್ನು ಭದ್ರತೆಗಿಟ್ಟು, 20 ಲಕ್ಷ ರೂ.ಗಳ ಸಾಲ ಪಡೆದಿರುವುದನ್ನು ಆಸ್ನೋಟಿಕರ್ ಬಹಿರಂಗ ಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣೆ ವೇಳೆ ಸಲ್ಲಿಸಿದ ಆಸ್ತಿ ವಿವರವನ್ನು ದಾಖಲಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಆಸ್ತಿ ವಿವರದ ತನಿಖೆಯನ್ನು ಪೂರ್ಣಗೊಳಿಸಿ ಅಂದಿನ ಚುನಾವಣಾಧಿಕಾರಿಗಳಿಗೆ ನೀಡಿರುವುದು ಗೊಂದಲದಿಂದ ಕೂಡಿದ್ದು, ಒಟ್ಟಾರೆ ಪ್ರಕರಣವನ್ನು ಪುನರ್ ತನಿಖೆ ನಡೆಸಬೇಕೆಂದು ಅವರು ತಿಳಿಸಿದ್ದಾರೆ.
ಆದರೆ ಈ ಬಗ್ಗೆ ವಿರೋಧ ಪಕ್ಷಗಳು ಅನಗತ್ಯವಾಗಿ ಶಾಂತಿ ಕದಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು. ಈ ಪ್ರಕರಣದ ಕುರಿತು ಜನತಾ ನ್ಯಾಯಾಲಯದ ಮುಂದೆ ಸಮರ್ಥವಾಗಿ ಎದುರಿಸಲಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. |