ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರಂಗಸ್ವಾಮಿ ಪುತ್ರನಿಂದ ಕರ್ನಾಟಕ ಜನತಾ ಪಕ್ಷ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಂಗಸ್ವಾಮಿ ಪುತ್ರನಿಂದ ಕರ್ನಾಟಕ ಜನತಾ ಪಕ್ಷ
ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುವುದರ ಮೂಲಕ ಗಿನ್ನೆಸ್ ದಾಖಲೆ ಮಾಡಿದ್ದ ಹೊಟ್ಟೆ ಪಕ್ಷದ ರಂಗಸ್ವಾಮಿ ಅವರ ಪುತ್ರ ಪ್ರಸನ್ನ ಕುಮಾರ್ ಕರ್ನಾಟಕ ಜನತಾ ಪಕ್ಷ ಎಂಬ ಪ್ರಾದೇಶಿಕ ಪಕ್ಷ ಕಟ್ಟುವುದರ ಮೂಲಕ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ.

ತಮ್ಮ ನೂತನ ಕರ್ನಾಟಕ ಜನತಾ ಪಕ್ಷದಲ್ಲಿ ಭ್ರಷ್ಟಾಚಾರ ನಿರ್ಮೂಲನೆ, ರೈತರ ಆತ್ಮಹತ್ಯೆ ನಿಲ್ಲಿಸಲು ಕ್ರಮ, ಯುವ ಶಕ್ತಿಗೆ ಪ್ರಾಮುಖ್ಯತೆ, ಕರ್ನಾಟಕಕ್ಕೆ ಶಾಸ್ತ್ರೀಯ ಸ್ಥಾನಮಾನ ಸೇರಿದಂತೆ ರಾಜ್ಯದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಾಡು ನುಡಿ, ಜಲ, ಭಾಷೆ, ಸಂಸ್ಕೃತಿಯನ್ನು ರಕ್ಷಣೆ ಮಾಡುವುದು ಹಾಗೂ ನೆರೆರಾಜ್ಯಗಳೊಂದಿಗೆ ಸುಮಧುರ ಬಾಂಧವ್ಯ ಕಾಪಾಡುವುದು ಪಕ್ಷದ ಪ್ರಮುಖ ಆದ್ಯತೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಈ ಮೊದಲು ಹಲವು ಪ್ರಾದೇಶಿಕ ಪಕ್ಷಗಳು ರಾಜ್ಯದಲ್ಲಿ ವಿಫಲವಾಗಿದ್ದರೂ, ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನು ಕಡೆಗೆಣಿಸಿರುವುದರಿಂದ ಪ್ರಾದೇಶಿಕ ಪಕ್ಷಕಟ್ಟುವುದು ಅನಿವಾರ್ಯ ವಾಯಿತು ಎಂದು ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಉಜ್ವಲ ಭವಿಷ್ಯವಿದೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭದ್ರತೆ ಬಿಸಿ:ಶಾಸಕರಿಂದ ಪೊಲೀಸ್‌ಗೆ ಕಪಾಳ ಮೋಕ್ಷ
ಆಸ್ತಿ ವಿವರ ರಹಸ್ಯವಾಗಿಟ್ಟಿದ್ದೆ: ಆಸ್ನೋಟಿಕರ್
ಬಿಜೆಪಿಯಿಂದ ದ್ವೇಷದ ರಾಜಕಾರಣ: ಶಂಕರ್
ಮತ್ತೆ ಲಾರಿ ಮುಷ್ಕರ ಬೆದರಿಕೆ
ತಲಕಾವೇರಿಯಲ್ಲಿ 'ಕಾವೇರಿ ದರ್ಶನ'
ಪ್ರಧಾನಿಯಾಗಿದ್ದರೆ ಸರ್ಕಾರ ವಜಾ ಮಾಡುತ್ತಿದ್ದೆ: ಗೌಡ