ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಜಾಮೀನು ದೊರೆತರೂ ದಿವಾಕರ ಬಾಬು ಜೈಲಿಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಾಮೀನು ದೊರೆತರೂ ದಿವಾಕರ ಬಾಬು ಜೈಲಿಗೆ
ತುಮಟೆ ಗಣಿ ವಿವಾದಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಮಾಜಿ ಸಚಿವ ದಿವಾಕರ ಬಾಬು ಸೇರಿದಂತೆ 13 ಮಂದಿಯನ್ನು ಸಂಡೂರು ನ್ಯಾಯಾಲಯದಲ್ಲಿ ಜಾಮೀನು ದೊರೆತಿದ್ದರೂ, ಬಂಧಿತರನ್ನು ಇದೀಗ ಪೊಲೀಸರು ಬಳ್ಳಾರಿ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ.

ತುಮಟಿ ಗಣಿ ಪ್ರದೇಶದಲ್ಲಿ ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಕಾರಣಕ್ಕೆ ಸೆ.29ರಂದು ತೋರಣಗಲ್ಲು ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿವಾಕರ್ ಬಾಬು ಹಾಗೂ 13 ಮಂದಿ ಆರೋಪಿಗಳಿಗೆ ಸಂಡೂರಿನ ಪ್ರಥಮ ದರ್ಜೆ ನ್ಯಾಯಿಕದಂಡಾಧಿಕಾರಿಗಳ ಮುಂದೆ ಹಾಜರು ಪಡಿಸಲಾಗಿತ್ತು.

ವಿಚಾರಣೆ ನಡೆಸಿದ ನ್ಯಾಯಾಲಯ ತಲಾ 10 ಸಾವಿರ ರೂ. ಬಾಂಡ್ ಮತ್ತು ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಳಿಸಿತ್ತು. ಆದರೆ ಜಾಮೀನು ದೊರೆತರೂ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಇದೀಗ ಬಳ್ಳಾರಿ ಕಾರಗೃಹದಲ್ಲಿ ಇರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕುಮಾರಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ:ಸರ್ಕಾರ
ಎಲ್ಲಾ ಬಡವರಿಗೆ ಪಡಿತರ ಚೀಟಿ: ಸಿಎಂ
ಸಿದ್ದರಾಮಯ್ಯ ಜತೆ ಬಿಜೆಪಿ ಸಚಿವರ ರಹಸ್ಯ ಭೇಟಿ !
ಹೊಗೇನಕಲ್ ವಿವಾದ: ಜಂಟಿ ಸಭೆಗೆ ನಿರ್ಧಾರ
ಕೊಪ್ಪದಲ್ಲಿ ಮತ್ತೆ ಇಬ್ಬರು ಶಂಕಿತ ಉಗ್ರರ ಸೆರೆ
ನ.12 ರಂದು ದೇಶವ್ಯಾಪಿ ಕಾಲೇಜ್ ಬಂದ್