ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನ.15ರಂದು ಕನಕ ಜಯಂತಿ: ಈಶ್ವರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ.15ರಂದು ಕನಕ ಜಯಂತಿ: ಈಶ್ವರಪ್ಪ
ಕನಕ ಉತ್ಸವದ ಮಾದರಿಯಲ್ಲಿ ನವೆಂಬರ್ 15ರಂದು ರಾಜ್ಯಾದ್ಯಂತ ಕನಕ ಜಯಂತಿ ಆಚರಿಸಲಾಗುವುದು ಎಂದು ಇಂಧನ ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

ಕನಕ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಆ ದಿನದಂದು ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

ಶಾಲಾ-ಕಾಲೇಜುಗಳಲ್ಲಿ ಜಯಂತಿ ಆಚರಣೆ ಹಾಗೂ ಕನಕ ಪ್ರಶಸ್ತಿ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ ಅವರು, ಕಾಗಿನೆಲೆ ಪ್ರತಿಷ್ಠಾನದಲ್ಲಿ ಅಭಿವೃದ್ಧಿ ಕಾರ್ಯ ನಡೆಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ.

ಈ ಮೊದಲು ಸಚಿವರು ಕನಕ ಗೋಪುರದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಕುರುಬ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೈತ್ರಿ: 26ರಂದು ಚೌಹಾಣ್ ನಗರಕ್ಕೆ
ಸೋನಿಯಾ ತೇಜೋವಧೆಗೆ ಭೈರಪ್ಪ ಯತ್ನ: ಖರ್ಗೆ
ಜಾಮೀನು ದೊರೆತರೂ ದಿವಾಕರ ಬಾಬು ಜೈಲಿಗೆ
ಕುಮಾರಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ:ಸರ್ಕಾರ
ಎಲ್ಲಾ ಬಡವರಿಗೆ ಪಡಿತರ ಚೀಟಿ: ಸಿಎಂ
ಸಿದ್ದರಾಮಯ್ಯ ಜತೆ ಬಿಜೆಪಿ ಸಚಿವರ ರಹಸ್ಯ ಭೇಟಿ !