ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಐದು ವರ್ಷದಲ್ಲಿ 10 ಲಕ್ಷ ಉದ್ಯೋಗ: ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐದು ವರ್ಷದಲ್ಲಿ 10 ಲಕ್ಷ ಉದ್ಯೋಗ: ಸಿಎಂ
ಮುಂದಿನ ಐದು ವರ್ಷಗಳಲ್ಲಿ 10 ಲಕ್ಷ ನಿರುದ್ಯೋಗಿಗಳಿಗೆ ಹತ್ತು ಲಕ್ಷ ಉದ್ಯೋಗ ಕಲ್ಪಿಸುವುದು ಸರ್ಕಾರದ ಗುರಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ನಗರದ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸುವ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲಾಗುವುದು ಎಂದು ಅವರು ತಿಳಿಸಿದರು.

ಅಲ್ಲದೆ, ಇಂತಹ ಮೇಳಗಳನ್ನು ನವೆಂಬರ್‌‌‌ನಲ್ಲಿ ಹುಬ್ಬಳ್ಳಿ, ಶಿವಮೊಗ್ಗ ಹಾಗೂ ಡಿಸೆಂಬರ್‌‌ನಲ್ಲಿ ಗುಲ್ಬರ್ಗಾದಲ್ಲಿ ನಡೆಸಲಾಗುವುದು ಎಂದು ತಿಳಿಸಿದ ಅವರು, ಮುಂದಿನ ಆರು ತಿಂಗಳ ಅವಧಿಯಲ್ಲಿ ವಿಭಾಗೀಯ ಮಟ್ಟದಲ್ಲೂ ಇಂತಹ ಮೇಳಗಳನ್ನು ನಡೆಸುವ ಮೂಲಕ ನಿರುದ್ಯೋಗಿಗಳ ಬದುಕಿನಲ್ಲಿ ಭರವಸೆಯ ಆಶಾಕಿರಣ ಮೂಡಿಸಲಾಗುವುದು ಎಂದು ಅವರು ತಿಳಿಸಿದರು.

ಇಂತಹ ಸ್ಪರ್ಧಾತ್ಮಕ ಯುಗದಲ್ಲಿ ವೃತ್ತಿ ಕೌಶಲ್ಯದ ಅಗತ್ಯವಿದ್ದು, ಇದನ್ನು ನಿರುದ್ಯೋಗಿಗಳಿಗೆ ನೀಡುವ ಸಲುವಾಗಿ ತರಬೇತಿ ನೀಡುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಅವರು ಹೇಳಿದ್ದಾರೆ.

10 ಸಾವಿರ ನಿರುದ್ಯೋಗಿಗಳ ನೋಂದಣಿ: ಶನಿವಾರ ಆರಂಭಗೊಂಡ ಬೃಹತ್ ಉದ್ಯೋಗ ಮೇಳದಲ್ಲಿ ಸುಮಾರು 10 ಸಾವಿರ ಮಂದಿ ನಿರುದ್ಯೋಗಿಗಳು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದು, ತಮ್ಮ ಅದೃಷ್ಟಕ್ಕಾಗಿ ಕಾಯುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೊರ ರಾಜ್ಯ ನೌಕರರಿಗೆ ಅವಕಾಶ ಇಲ್ಲ: ಕರವೇ
ನ.15ರಂದು ಕನಕ ಜಯಂತಿ: ಈಶ್ವರಪ್ಪ
ಮೈತ್ರಿ: 26ರಂದು ಚೌಹಾಣ್ ನಗರಕ್ಕೆ
ಸೋನಿಯಾ ತೇಜೋವಧೆಗೆ ಭೈರಪ್ಪ ಯತ್ನ: ಖರ್ಗೆ
ಜಾಮೀನು ದೊರೆತರೂ ದಿವಾಕರ ಬಾಬು ಜೈಲಿಗೆ
ಕುಮಾರಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ:ಸರ್ಕಾರ