ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಚಿಕ್ಕಮಗಳೂರು:ಉಗ್ರರ ಜಾಲ ಪತ್ತೆಗೆ ತೀವ್ರ ಶೋಧ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಿಕ್ಕಮಗಳೂರು:ಉಗ್ರರ ಜಾಲ ಪತ್ತೆಗೆ ತೀವ್ರ ಶೋಧ
ಗುರುವಾರ ಬಂಧಿಸಲ್ಪಟ್ಟ ಶಂಕಿತ ಉಗ್ರರಿಬ್ಬರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಶನಿವಾರ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡದ ಅರಣ್ಯ ಪ್ರದೇಶದಲ್ಲಿ ಉಗ್ರರು ಮತ್ತು ನಕ್ಸಲೀಯರಿಗಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಶಂಕಿತ ಉಗ್ರರ ಸಂಘಟನೆಗಳ ಕಾರ್ಯಕರ್ತರು ಹಕ್ಕಲಬೈಲು, ಶೃಂಗೇರಿ, ಉಡುಪಿ ಸೇರಿದಂತೆ ನೆರೆಯ ಅರಣ್ಯ ಪ್ರದೇಶದಲ್ಲಿ ತರಬೇತಿ ಪಡೆದಿರುವ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದು,ಹಲವು ಶಂಕಿತರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.

ಕೊಪ್ಪದಲ್ಲಿ ಗುರುವಾರ ಸೆರೆ ಸಿಕ್ಕ ರಫೀಕ್ ಮತ್ತು ಫಕೀರ್ ಅಹ್ಮದ್ ಆಲಿಯಾಸ್ ಫಕೀರ್ ಬಾವಾ ಹಾಗೂ ಅವರ ಇನ್ನಿತರ ಸಹಚರರು ಅರಣ್ಯದಲ್ಲಿ ಶಸ್ತ್ರಾಸ್ತ್ರ ಬಳಕೆಯ ತರಬೇತಿ ಪಡೆದಿರುವ ಕುರಿತು ಮಾಹಿತಿ ನೀಡಿದ್ದರು ಎಂದು ತಿಳಿಸಿದೆ,

ಖಚಿತ ಮಾಹಿತಿ ಮೇರೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿನ ಎರಡು ಮನೆಗಳಿಗೆ ಗುರುವಾರ ದಾಳಿ ನಡೆಸುವ ಮೂಲಕ ರಫೀಕ್ ಮತ್ತು ಫಕೀರ್ ಇಬ್ಬರನ್ನು ಬಂಧಿಸಿದ್ದಲ್ಲದೇ, ಅಪಾರ ಪ್ರಮಾಣದಲ್ಲಿ ಸ್ಫೋಟಕ, ಆಯುಧ, ಶಸ್ತ್ರಾಸ್ತ್ರ ಮತ್ತು ಇಲೆಕ್ಟ್ರಿಕಲ್ ಕಿಟ್ ಅನ್ನು ವಶಪಡಿಸಿಕೊಂಡಿರವುದಾಗಿ ವಿವರಿಸಿದ್ದಾರೆ.

ಅಲ್ಲದೇ ಚಿಕ್ಕಮಗಳೂರು ಕಾಡಿನಲ್ಲಿ ಶಂಕಿತ ಉಗ್ರರು ಬಾಂಬ್ ಅನ್ನು ತಯಾರಿಸುವ ನೆಲೆ ಮಾಡಿಕೊಂಡಿರುವುದಾಗಿ ಯೂ ಮಹತ್ವದ ಅಂಶವನ್ನು ಬಹಿರಂಗಪಡಿಸಿದ್ದಾರೆ.

ದೇಶಾದ್ಯಂತ ನಡೆದಿರುವ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯಾಗಿರುವ ರಿಯಾಜ್ ಭಟ್ಕಳ ಕೂಡ ಇಲ್ಲಿ ಭೇಟಿಗೆ ನೀಡಿದ್ದ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಐದು ವರ್ಷದಲ್ಲಿ 10 ಲಕ್ಷ ಉದ್ಯೋಗ: ಸಿಎಂ
ಹೊರ ರಾಜ್ಯ ನೌಕರರಿಗೆ ಅವಕಾಶ ಇಲ್ಲ: ಕರವೇ
ನ.15ರಂದು ಕನಕ ಜಯಂತಿ: ಈಶ್ವರಪ್ಪ
ಮೈತ್ರಿ: 26ರಂದು ಚೌಹಾಣ್ ನಗರಕ್ಕೆ
ಸೋನಿಯಾ ತೇಜೋವಧೆಗೆ ಭೈರಪ್ಪ ಯತ್ನ: ಖರ್ಗೆ
ಜಾಮೀನು ದೊರೆತರೂ ದಿವಾಕರ ಬಾಬು ಜೈಲಿಗೆ