ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಳ್ಳಾರಿ ಆಡಳಿತ ರೆಡ್ಡಿಗಳಿಗೆ ಹೊರಗುತ್ತಿಗೆ: ಆರ್‌ವಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಳ್ಳಾರಿ ಆಡಳಿತ ರೆಡ್ಡಿಗಳಿಗೆ ಹೊರಗುತ್ತಿಗೆ: ಆರ್‌ವಿ
ಬಿಜೆಪಿಗೆ ಕೋಟ್ಯಂತರ ಹಣ ನೀಡಿದ ರೆಡ್ಡಿ ಸಹೋದರರ ಹಂಗಿನಲ್ಲಿರುವ ಬಿಜೆಪಿ ಸರ್ಕಾರ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಸಂಪತ್ತನ್ನು ಲೂಟಿ ಮಾಡಲು ಅವಕಾಶ ಕಲ್ಪಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಆರೋಪಿಸಿದ್ದಾರೆ.

ಬಿಜೆಪಿ ಖಜಾನೆಗೆ ಬಳ್ಳಾರಿ ಗಣಿ ಮಾಲೀಕರಾದ ರೆಡ್ಡಿ ಸಹೋದರರು ಕೋಟ್ಯಾಂತರ ದೇಣಿಗೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸರ್ಕಾರ ಬಳ್ಳಾರಿ ಜಿಲ್ಲೆಯ ಆಡಳಿತ ವ್ಯವಸ್ಥೆಯನ್ನು ಸಚಿವರುಗಳಾದ ರೆಡ್ಡಿ ಸಹೋದರರಿಗೆ ಹೊರಗುತ್ತಿಗೆ ನೀಡಿ ನಾಡಿನ ಸಂಪತ್ತಿನ ಲೂಟಿಗೆ ಅವಕಾಶ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಡಿಯನ್ನು ಉಲ್ಲಂಘಿಸಿ ರಾಜ್ಯದ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಮಾಡುತ್ತಿರುವುದನ್ನು ವಿರೋಧಿಸಿ ಹೋರಾಟ ನಡೆಸಿದ ದಿವಾಕರ ಬಾಬು ಮತ್ತಿತರ ಮುಖಂಡರ ಮೇಲೆ ಪೊಲೀಸರ ಮೂಲಕ ದೌರ್ಜನ್ಯ ನಡೆಸಿ ಪ್ರತಿಭಟನೆ ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ, ಬಳ್ಳಾರಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಅವರು ಆಪಾದಿಸಿದ್ದಾರೆ.

ಇದು ಇದೇ ರೀತಿ ಮುಂದುವರಿದರೆ ಕಾಂಗ್ರೆಸ್ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದವರು ಎಚ್ಚರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೋನಿ ಆತ್ಮಹತ್ಯೆ: ಆರೋಪಿಗಳ ಜಾಮೀನು ಅರ್ಜಿ ವಜಾ
ಚಿಕ್ಕಮಗಳೂರು:ಉಗ್ರರ ಜಾಲ ಪತ್ತೆಗೆ ತೀವ್ರ ಶೋಧ
ಐದು ವರ್ಷದಲ್ಲಿ 10 ಲಕ್ಷ ಉದ್ಯೋಗ: ಸಿಎಂ
ಹೊರ ರಾಜ್ಯ ನೌಕರರಿಗೆ ಅವಕಾಶ ಇಲ್ಲ: ಕರವೇ
ನ.15ರಂದು ಕನಕ ಜಯಂತಿ: ಈಶ್ವರಪ್ಪ
ಮೈತ್ರಿ: 26ರಂದು ಚೌಹಾಣ್ ನಗರಕ್ಕೆ