ಬೆಂಗಳೂರು: ವಿವಾದಾಸ್ಪದ ಹೊಗೇನಕಲ್ ವಿವಾದ ಕುರಿತು ಉಭಯ ರಾಜ್ಯಗಳ ಸಭೆ ಕರೆಯುವುದಾಗಿ ಕೇಂದ್ರ ಸರ್ಕಾರ ಹೇಳಿರುವುದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ವಾಗತಿಸಿದ್ದಾರೆ. ಹೊಗೇನಕಲ್ ವಿವಾದ ಸಂಬಂಧ ಜಂಟಿ ಸಮೀಕ್ಷೆ ನಡೆಸಬೇಕು ಎಂದು ರಾಜ್ಯ ಸರ್ಕಾರ ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿದೆ.
ವಿವಾದದ ಸತ್ಯ ಸಂಗತಿ ಗೊತ್ತಾಗಬೇಕು ಎಂಬುದು ರಾಜ್ಯದ ನಿಲುವು. ಕೇಂದ್ರ ಸರ್ಕಾರ ಉಭಯ ರಾಜ್ಯಗಳನ್ನು ಮಾತುಕತೆಗೆ ಕರೆದಿರುವುದು ಸ್ವಾಗತಾರ್ಹ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ಮಾತುಕತೆಗೆ ರಾಜ್ಯ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಹೇಳಿದ್ದಾರೆ.
ಹೂವಿನಡಗಲಿಯ ಎಂಜಿನಿಯರಿಂಗ್ ಕಾಲೇಜನ್ನು ಬಳ್ಳಾರಿಗೆ ಸ್ಥಳಾಂತರ ಮಾಡಿದ್ದಕ್ಕೆ ಯಾವುದೇ ದ್ವೇಷದ ಹಿನ್ನೆಲೆ ಇಲ್ಲ. ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿದಿತ್ತು. ಆ ಕಾರಣದಿಂದ ಸ್ಥಳಾಂತರ ಮಾಡಲಾಗಿದೆ ಎಂದು ಸಮಜಾಯಿಷಿ ನೀಡಿದರು. ಯಾವುದೇ ಕಾರಣಕ್ಕೂ ತಾವು ಹಗೆತನ ಸಾಧಿಸುವ ರಾಜಕೀಯ ಮಾಡುವುದಿಲ್ಲ ಎಂದರು. |